»   » ಸೆ.30ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಪರಮಾತ್ಮ

ಸೆ.30ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಪರಮಾತ್ಮ

Posted By:
Subscribe to Filmibeat Kannada

ಪವರ್ ಸ್ಟಾ ಪುನೀತ್ ರಾಜ್ ಕುಮಾರ್ ಹಾಗೂ ದೀಪಾ ಸನ್ನಿದ್ಧಿ ಮುಖ್ಯಭೂಮಿಕೆಯಲ್ಲಿರುವ 'ಪರಮಾತ್ಮ' ಚಿತ್ರಸೆಪ್ಟೆಂಬರ್ 30ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.ಚಿತ್ರದ ಪ್ರೊಮೋಗಳು ಈಗಗಾಗಲೆ ಸಾಕಷ್ಟು ಸದ್ದು ಮಾಡಿರುವುದು ಯೋಗರಾಜ್ ಭಟ್ಟರು ಮತ್ತೊಂದು ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ.

ಕೆ ಜಿ ರಸ್ತೆಯ ಸಂತೋಷ್ ಚಿತ್ರಮಂದಿರ ಪರಮಾತ್ಮನಿಗಾಗಿ ಬುಕ್ ಆಗಿದೆ. ಪರಮಾತ್ಮ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ, ಯಾವ ಯಾವ ಪ್ರದೇಶದ ವಿತರಣೆ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿದೆ ಎಂಬುದು ಇನ್ನಷ್ಟೇ ಹೊರಬೀಳಬೇಕಾಗಿದೆ.

ಪರಮಾತ್ಮ ಚಿತ್ರ ಸಕ್ಸಸ್ ಆಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಮೂಲಕ ಪುನೀತ್ ಅವರ ಮುಡಿಗೆ ಮತ್ತೊಂದು ಗರಿ ಮೂಡಲಿದೆ. ಕನ್ನಡಕ್ಕೆ ಮತ್ತೊಬ್ಬ ಹ್ಯಾಟ್ರಿಕ್ ಹೀರೋ ಸಿಕ್ಕಂತಾಗುತ್ತದೆ. ಜಾಕಿ ಹಾಗೂ ಹುಡುಗರು ಚಿತ್ರಗಳು ಸತತ ಸೆಂಚುರಿ ಭಾರಿಸಿವೆ. ಭಟ್ಟರ ಮ್ಯಾಜಿಕ್ ಏನಾಗುತ್ತದೋ ನೋಡಬೇಕು. ಪರಮಾತ್ಮ ಟ್ರೈಲರ್ ನೋಡಿ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Power Star Puneet Rajkumar lead Kannada movie Paramathma Planning to release on Sept 30.The Santosh theater on KG Road as the main theatre has been already booked for the release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada