»   » ಯಶವಂತಪುರ ಹೊಸ ಕಾರ್ಪೊರೇಟರ್ ಮುನಿರತ್ನ

ಯಶವಂತಪುರ ಹೊಸ ಕಾರ್ಪೊರೇಟರ್ ಮುನಿರತ್ನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ನಿರ್ಮಾಪಕ ಮುನಿರತ್ನ ನಾಯ್ಡು ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದಂತಹ ಕನ್ನಡ ಚಿತ್ರರಂಗದ ಏಕೈಕ ವೀರ ಎನ್ನಬಹುದು. ಕಾಂಗ್ರೆಸ್ ಪಕ್ಷದಿಂದ ಯಶವಂತಪುರ ವಾರ್ಡ್ ನಲ್ಲಿ (ವಾರ್ಡ್ ನಂ.37) ಸ್ಪರ್ಧಿಸಿದ್ದ ಮುನಿರತ್ನ ನಾಯ್ಡು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಆಂಟಿ ಪ್ರೀತ್ಸೆ, ಕಂಬಾಲಹಳ್ಳಿ, ರಕ್ತ ಕಣ್ಣೀರು, ಅನಾಥರು ಚಿತ್ರಗಳನ್ನು ಮುನಿರತ್ನ ನಾಯ್ಡು ನಿರ್ಮಿಸಿದ್ದಾರೆ. ಮುನಿರತ್ನ ನಾಯ್ಡು ಒಟ್ಟು 7434 ಮತಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ. ಅವರ ಸಮೀಪ ಸ್ಪರ್ಧಿ ಬಿಜೆಪಿಯ ಬಿಕೆ ವೆಂಕಟೇಶ್ ಅವರು ಒಟ್ಟು 5034 ಮತಗಳನ್ನು ಪಡೆದಿದ್ದರೆ ಜೆಡಿಎಸ್ ನ ಬಿ ಆರ್ ಮಂಜುನಾಥ್ 3030 ಮತಗಳನ್ನು ಪಡೆದಿದ್ದಾರೆ.

ಕಿರುತೆರೆ ನಿರ್ದೇಶಕ, ರಂಗಭೂಮಿ ಕಲಾವಿದ ಹಾಗೂ 'Stumble" ಇಂಗ್ಲಿಷ್ ಚಿತ್ರದ ನಿರ್ದೇಶಕ ಪ್ರಕಾಶ್ ಬೆಳವಾಡಿ ಲೋಕ್ ಸತ್ತಾ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದಾರೆ. 'ಶಿವಾನಿ' ಕನ್ನಡ ಚಿತ್ರದ ನಿರ್ದೇಶಕ ನೆ ಲ ರವಿಶಂಕರ್ (ಶಾಸಕ ನೆ ಲ ನರೇಂದ್ರಬಾಬು ಅವರ ಸಹೋದರ) ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದಾರೆ. ಮತ್ತೊಬ್ಬ ನಿರ್ದೇಶಕ ತೇಶಿ ವೆಂಕಟೇಶ್ ಸಹ ಜೆಡಿಎಸ್ ನಿಂದ ಸ್ಪರ್ಧಿಸಿ ಸೋತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada