»   »  ದಣಿವಾರಿಸಿಕೊಳ್ಳಲು ಗೋವಾ ತೀರಕ್ಕೆ ಪುನೀತ್

ದಣಿವಾರಿಸಿಕೊಳ್ಳಲು ಗೋವಾ ತೀರಕ್ಕೆ ಪುನೀತ್

Subscribe to Filmibeat Kannada
Puneeth Rajkumar
ರಾಜ್ ಮತ್ತು ರಾಮ್ ಚಿತ್ರಗಳ ಬಿಡುವಿಲ್ಲದ ಕೆಲಸಗಳಿಂದ ಪುನೀತ್ ರಾಜ್ ಕುಮಾರ್ ಬಳಲಿದ್ದಾರೆ. ಚಿತ್ರೀಕರಣಕ್ಕಾಗಿ ಅಲ್ಲಿ ಇಲ್ಲಿ ಅಲೆದು ಮನೆ ಮಠಕ್ಕೆ ದೂರವಾಗಿದ್ದರು. ಈ ಎಲ್ಲಾ ಜಂಜಡಗಳಿಂದ ಒಂಚೂರು ರಿಲ್ಯಾಕ್ಸ್ ಆಗಲು, ಕುಟುಂಬದವರೊಂದಿಗೆ ಕಳೆಯಲು ಬ್ರೇಕ್ ತೆಗೆದುಕೊಂಡಿದ್ದಾರೆ.

ಕುಟುಂಬದವರೊಂದಿಗೆ ಕೆಲವಾರಗಳನ್ನು ಗೋವಾ ತೀರದಲ್ಲಿ ಪುನೀತ್ ಕಳೆಯಲಿದ್ದಾರೆ. ಬೇಸಿಗೆ ಧಗೆಯನ್ನು ನಿವಾರಿಸಿಕೊಳ್ಳಲು ಗೋವಾಗಿಂತಲೂ ಪ್ರಶಸ್ತ ತಾಣ ಮತ್ತೊಂದಿರಲಿಕ್ಕಿಲ್ಲ ಎನ್ನುತ್ತಾರೆ ಪುನೀತ್. ಗೋವಾದಿಂದ ಹಿಂತಿರುಗಿದ ನಂತರ ರಾಜ್ ಚಿತ್ರೀಕರಣ ಮುಂದುವರೆಯಲಿದೆ.

ಈಗಾಗಲೇ ಕಾಲು ಮುರಿದುಕೊಂಡಿರುವ ರಾಜ್ ಚಿತ್ರದ ನಾಯಕಿ ನಿಶಾ ಕೊಠಾರಿ ಸಹ ವಿಶ್ರಾಂತಿ ಪಡೆಯುತ್ತಿದ್ದಾರೆ. ರಾಜ್ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಪುನೀತ್ ಹಿಂತಿರುಗಿದ ನಂತರ ರಾಜ್ ಚಿತ್ರದ ಉಳಿದ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್
ಪುನೀತ್ ರಿಂದ ರಾಜ್ ಕುರಿತು ಅಪರೂಪ ಪುಸ್ತಕ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada