»   » 'ಆಪ್ತರಕ್ಷಕ' ಜೊತೆಗೆ ರಮೇಶ್ 'ಕ್ರೇಜಿ ಕುಟುಂಬ'

'ಆಪ್ತರಕ್ಷಕ' ಜೊತೆಗೆ ರಮೇಶ್ 'ಕ್ರೇಜಿ ಕುಟುಂಬ'

Posted By:
Subscribe to Filmibeat Kannada

ನಟ ರಮೇಶ್ ಅರವಿಂದ ಅಭಿನಯದ 'ಕ್ರೇಜಿ ಕುಟುಂಬ' ಈ ವಾರ (ಫೆ.12) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಹುನಿರೀಕ್ಷಿತ 'ಆಪ್ತರಕ್ಷಕ' ಚಿತ್ರದ ಜೊತೆ 'ಕ್ರೇಜಿ ಕುಟುಂಬ' ಸ್ಪರ್ಧಿಸಲಿದೆ. ಅಪ್ಪಟ ಹಾಸ್ಯ ಚಿತ್ರವಾಗಿರುವ 'ಕ್ರೇಜಿ ಕುಟುಂಬ' ನಿಸ್ಸಂದೇಹವಾಗಿ ಪ್ರೇಕ್ಷಕರನ್ನು ಎರಡುವರೆ ಗಂಟೆಗಳ ಕಾಲ ನಕ್ಕು ನಗಿಸುತ್ತದೆ ಎನ್ನುತಾರೆ ರಮೇಶ್.

'ಆಪ್ತಮಿತ್ರ' ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ರಮೇಶ್ ಇಬ್ಬರೂ ನಟಿಸಿದ್ದರು. ಈಗ ಇವರಿಬ್ಬರೂ ಬೇರೆ ಬೇರೆ ಚಿತ್ರಗಳಲ್ಲಿ ನಟಿಸಿದ್ದರೂ ಒಂದೇ ದಿನ ತೆರೆಕಾಣುತ್ತಿರುವುದು ವಿಶೇಷ. ವಿಷ್ಣುವರ್ಧನ್ ಮತ್ತು ರಮೇಶ್ ಇಬ್ಬರನ್ನೂ ಕಣ್ತುಂಬಿಕೊಳ್ಳುವ ಕಾಲ ಮತ್ತೆ ಪ್ರೇಕ್ಷಕರ ಪಾಲಿಗೆ ಬಂದಿದೆ.

ಬಿ.ರಾಮಮೂರ್ತಿ ನಿರ್ದೇಶನದ ಈ ಚಿತ್ರ ಮರಾಠಿ ಚಿತ್ರವೊಂದರ ಸ್ಪೂರ್ತಿಯಿಂದ ನಿರ್ಮಾಣವಾಗಿದೆ. ಹಿರಿಯನಟ ಅನಂತನಾಗ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿರುವ ಅವರು ಚಿತ್ರ ಯಶಸ್ಸು ಕಾಣುವುದು ಖಂಡಿತಾ ಎಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada