»   » ಸಂಕ್ರಾಂತಿ ಸಮಯಕ್ಕೆ 'ಸೂರ್ಯಕಾಂತಿ'

ಸಂಕ್ರಾಂತಿ ಸಮಯಕ್ಕೆ 'ಸೂರ್ಯಕಾಂತಿ'

Posted By:
Subscribe to Filmibeat Kannada

ಅವಿಘ್ನ ಮೀಡಿಯಾ ಲಾಂಛನದಲ್ಲಿ ಎಂ.ವಾಸು ಅರ್ಪಿಸಿ, ಶ್ರೀಮತಿ ಸುಜಾತ ನಿರ್ಮಿಸಿರುವ 'ಸೂರ್ಯಕಾಂತಿ' ಚಿತ್ರ ಮಕರ ಸಂಕ್ರಾಂತಿ ವೇಳೆಗೆ ತೆರೆಗೆ ಬರಲಿದೆ. 'ಆ ದಿನಗಳು' ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶಿಸಿರುವ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ.

ಚೇತನ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿ ರೆಜೀನಾ ಅಭಿನಯಿಸಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ ನೀಡಿರುವ 'ಸೂರ್ಯಕಾಂತಿ'ಗೆ ಕೆ.ವೈ.ನಾರಾಯಣಸ್ವಾಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇಳಯರಾಜ ಸಂಗೀತ, ಹರಿದಾಸ್ ಕೆ ಜಿ ಎಫ್ ಸಂಕಲನ, ಯೋಗರಾಜ್‌ಭಟ್, ಜಯಂತಕಾಯ್ಕಿಣಿ, ಕೆ.ಕಲ್ಯಾಣ್ ಗೀತರಚನೆ ಹಾಗೂ ದಿನೇಶ್‌ಮಂಗಳೂರು ಕಲಾನಿರ್ದೇಶನವಿದೆ.

ಚಿತ್ರದ ಉಳಿದ ತಾರಾಬಳಗದಲ್ಲಿ ನಾಸರ್, ರಾಮಕೃಷ್ಣ, ಕಿಶೋರಿಬಲ್ಲಾಳ್, ಏಣಗಿ ನಟರಾಜ್, ಆಸಿಫ್, ಗಣೇಶ್‌ಯಾದವ್ ಮುಂತಾದವರಿದ್ದಾರೆ. ಉಜ್ಬೆಕಿಸ್ತಾನದಲ್ಲಿ ಚಿತ್ರೀಕರಿಸಿರುವ ಮೊದಲ ಕನ್ನಡ ಚಿತ್ರ ಎಂಬ ಹೆಚ್ಚುಗಾರಿಕೆಗೆ 'ಸೂರ್ಯಕಾಂತಿ' ಪಾತ್ರವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada