»   » ಫೆ.12ರಂದು ವಿಷ್ಣುವರ್ಧನ್ 'ಆಪ್ತರಕ್ಷಕ' ತೆರೆಗೆ

ಫೆ.12ರಂದು ವಿಷ್ಣುವರ್ಧನ್ 'ಆಪ್ತರಕ್ಷಕ' ತೆರೆಗೆ

Posted By:
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಕಟ್ಟೆಕಡೆಯ ಚಿತ್ರ 'ಆಪ್ತರಕ್ಷಕ' ಈ ವಾರ (ಫೆ.12) ರಾಜ್ಯಾದ್ಯಂತ ತೆರೆಕಾಣಲಿದೆ. 'ಆಪ್ತರಕ್ಷಕ' ಚಿತ್ರಕ್ಕಾಗಿ ಬೆಂಗಳೂರು ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರವನ್ನು ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ.

ಈಗಾಗಲೇ 'ಆಪ್ತರಕ್ಷಕ' ಚಿತ್ರದ ಧ್ವನಿಸುರುಳಿಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಹಜವಾಗಿಯೇ ಚಿತ್ರದ ಬಗ್ಗೆ ನಿರೀಕ್ಷೆಗಳು ಸಹ ಜೋರಾಗಿವೆ. ಲಂಡನ್ ನಲ್ಲಿ ಚಿತ್ರಕ್ಕಾಗಿ ವಿಶೇಷ ಗ್ರಾಫಿಕ್ಸ್ ಕೆಲಸ ಮಾಡಿಸಿರುವುದಾಗಿ ಚಿತ್ರದ ನಿರ್ಮಾಪಕ ಕೃಷ್ಣಪ್ರಜ್ವಲ್ ತಿಳಿಸಿದ್ದಾರೆ.

'ಆಪ್ತಮಿತ್ರ'ನಿರ್ದೇಶಿಸಿದ್ದ ಪಿ.ವಾಸು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ತಾರಾಗಣದಲ್ಲಿ ವಿಷ್ಣುವರ್ಧನ್, ವಿಮಲಾ ರಾಮನ್, ಲಕ್ಷ್ಮಿ ಗೋಪಾಲಸ್ವಾಮಿ, ಭಾವನಾ, ಸಂಧ್ಯಾ, ಕೋಮಲ್ ಕುಮಾರ್, ಶ್ರೀನಿವಾಸಮೂರ್ತಿ, ಅವಿನಾಶ್ ಅಭಿನಯಿಸಿದ್ದಾರೆ.

ವಿಷ್ಣುವರ್ಧನ್ ಅವರ ಸಾವು ನಿರ್ಮಾಪಕ ಕೃಷ್ಣ ಪ್ರಜ್ವಲ್ ಅವರನ್ನು ದಿಗ್ಭ್ರಾಂತಗೊಳಿಸಿತ್ತು. ಸಮಸ್ತ ಕನ್ನಡಿಗರನ್ನು ಅವರ ಅಗಲಿಕೆಯ ನೋವು ಕಾಡುತ್ತಿದೆ. ಅಭಿಮಾನಿಗಳು ಈ ನೋವಿನಿಂದ ಹೊರಬಂದ ನಂತರ ಚಿತ್ರ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದರು. ಹಾಗಾಗಿ 'ಆಪ್ತರಕ್ಷಕ' ಚಿತ್ರ ಫೆ.12ರಂದು ಬಿಡುಗಡೆಯಾಗುತ್ತಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada