For Quick Alerts
  ALLOW NOTIFICATIONS  
  For Daily Alerts

  ವಿಭಿನ್ನ ಪ್ರೇಮ ಕಥಾನಕ ಧೂಳ್ ವಿಶೇಷಗಳು

  |

  ಶ್ರೀಸೇವಾಲಾಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಎಚ್.ಸುನೀಲ್ ನಿರ್ಮಿಸುತ್ತಿರುವ 'ಧೂಳ್ ಚಿತ್ರಕ್ಕೆ ನಗರದಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಐದು ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ನವೆಂಬರ್‌ನಲ್ಲಿ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

  ಕನ್ನಡ ಚಿತ್ರರಂಗದ ಬೇಡಿಕೆ ನಟರಾಗಿರುವ ಯೋಗೀಶ್ ಈ ಚಿತ್ರದ ನಾಯಕನ ಪಾತ್ರ ನಿರ್ವಹಣೆ ಮಾಡುತ್ತಿದ್ದು, 'ಮೆರವಣಿಗೆಯ ಬೆಡಗಿ ಅಂದ್ರಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಂ.ಎಸ್.ರಾಜಶೇಖರ್ ಅವರ ಪುತ್ರ ಧರಣಿ ಈ ವಿಭಿನ್ನ ಪ್ರೇಮ ಕಥಾನಕವನ್ನು ನಿರ್ದೇಶಿಸುತ್ತಿದ್ದಾರೆ. ವಿ.ಹರಿಕೃಷ್ಣ ಅವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ ಚಿತ್ರದ ಐದು ಹಾಡುಗಳನ್ನು ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣಗೊಳ್ಳಲಿದೆ.

  ಕೆ.ಎಚ್.ದತ್ತು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ರಾಮ್‌ನಾರಾಯಣ್ ಸಂಭಾಷಣೆ ರಚಿಸಿದ್ದಾರೆ. ಮೋಹನ್ ಪಂಡಿತ್ ಕಲೆ ಹಾಗೂ ರವಿವರ್ಮ ಅವರ ಸಾಹಸವಿರುವ ಈ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಅಂದ್ರಿತಾ ರೇ, ಪ್ರಕಾಶ್ ರೈ, ಓಂಪ್ರಕಾಶ್‌ರಾವ್ ಮುಂತಾದವರಿದ್ದಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X