For Quick Alerts
  ALLOW NOTIFICATIONS  
  For Daily Alerts

  ನಟನಾಗಿ ಯೋಗರಾಜ್ ಭಟ್ ಆರಂಗೇಟ್ರಂ

  By Rajendra
  |

  ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು ಆಕ್ಷನ್, ಕಟ್ ನಿಂದ ಕೊಂಚ ರಿಲ್ಯಾಕ್ಸ್ ಬಯಸಿದ್ದಾರೆ ಎಂದು ಕಾಣುತ್ತದೆ! ಕಾರಣ ಈಗ ಅವರು ಬಣ್ಣ ಹಚ್ಚಿಕೊಳ್ಳಲು ತಯಾರಿ ನಡೆಸಿದ್ದಾರೆ. ಅಂದರೆ ಮತ್ತೊಬ್ಬರ ಆಕ್ಷನ್, ಕಟ್‌ನಲ್ಲಿ ಭಟ್ಟರು ನಟಿಸಲಿದ್ದಾರೆ. ಹಾಗೆ ಬಂದು ಹೀಗೆ ಹೋಗುವ ಪಾತ್ರ ಇದಲ್ಲವಂತೆ.

  ಯೋಗರಾಜ್ ಭಟ್ಟರು ಬಣ್ಣ ಹಚ್ಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಜಾಕಿ' ಚಿತ್ರದ ಹಾಡೊಂದರಲ್ಲಿ ಭಟ್ಟರು ಕಾಣಿಸಿಕೊಂಡಿದ್ದರು. ಈಗ ಧೂದ್ ಪೇಡ ದಿಗಂತ್ ನಾಯಕ ನಟನಾಗಿರುವ 'ಕಾಂಚಾಣ' ಚಿತ್ರದಲ್ಲಿ ಭಟ್ಟರು ಮತ್ತೊಮ್ಮೆ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ.

  'ಕಾಂಚಾಣ' ಚಿತ್ರದಲ್ಲಿ ನಟಿಸುವುದರ ಜೊತೆಗೆ ಎರಡು ಹಾಡುಗಳನ್ನು ಭಟ್ಟರು ರಚಿಸಿರುವುದು ವಿಶೇಷ. 'ಕಾಂಚಾಣ' ಚಿತ್ರವನ್ನು ಶ್ರೀಗಣೇಶ್ ನಿರ್ದೇಶಿಸುತ್ತಿದ್ದಾರೆ. ರಾಗಿಣಿ ದ್ವಿವೇದಿ, ರಂಗಾಯಣ ರಘು, ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ತಬಲಾ ನಾಣಿ ಮುಂತಾದರ ತಾರಾಬಳಗವೇ ಈ ಚಿತ್ರಕ್ಕಿದೆ.

  English summary
  Kannada films renowned director Yograj Bhats to act in Kanchana. Previously he appearared in a song in Jackie. Diganth and Ragini Dwivedi are in lead roles of the movie.
  Thursday, December 9, 2010, 10:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X