»   » ಮೀಸೆ ಪ್ರೇಮಿ ನಾರಾಯಣ್‌ ತನಗೆ ಬ್ರೇಕ್‌ ಕೊಡಬಹುದೆಂಬ ಆಸೆ ಹೊತ್ತಿದ್ದ ಮಹಾಲಕ್ಷ್ಮಿಎಂಬ ಗಾಯಕಿಯ ಗ್ರಹಚಾರ ಸರಿಯಿಲ್ಲ ; ಆಕೆಯ ಮದುವೆಯೇ ಬ್ರೇಕ್‌ ಆಗಿದೆ !

ಮೀಸೆ ಪ್ರೇಮಿ ನಾರಾಯಣ್‌ ತನಗೆ ಬ್ರೇಕ್‌ ಕೊಡಬಹುದೆಂಬ ಆಸೆ ಹೊತ್ತಿದ್ದ ಮಹಾಲಕ್ಷ್ಮಿಎಂಬ ಗಾಯಕಿಯ ಗ್ರಹಚಾರ ಸರಿಯಿಲ್ಲ ; ಆಕೆಯ ಮದುವೆಯೇ ಬ್ರೇಕ್‌ ಆಗಿದೆ !

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ಪಕ್ಕ ಚುಕ್ಕ’ ಎಂಬ ಹಾಸ್ಯಾಸ್ಪದ ಚಿತ್ರದಲ್ಲಿ ನಟಿಸಿದ್ದಕ್ಕೆ ಮದುವೆಯೇ ಮುರಿದುಬಿದ್ದ ಕತೆಯಿದು-
ಹಾಡುಗಾರ್ತಿಯಾಗಿ ಹೆಸರು ಮಾಡಬೇಕೆಂಬ ಕನಸು ಹೊತ್ತಿರುವ ಮಹಾಲಕ್ಷ್ಮಿ ಎಂಬ ಮುದ್ದುಮುಖದ ಹುಡುಗಿ ಎಸ್‌.ನಾರಾಯಣ್‌ ಕಣ್ಣಿಗೆ ಬಿದ್ದಳು. ನೇರವಾಗಿ ತಮ್ಮ ನಾಯಕಿ ಸ್ಥಾನಕ್ಕೆ ಆಕೆಯನ್ನು ನಾರಾಯಣ್‌ ಆರಿಸಿದರು. ಇವೆಲ್ಲಕ್ಕೂ ಮೊದಲು ಮಹಾಲಕ್ಷ್ಮಿಯ ಮದುವೆ ನಿಶ್ಚಯವಾಗಿತ್ತು.

‘ಪಕ್ಕ ಚುಕ್ಕ’ ಸಿನಿಮಾ ರಿಲೀಸ್‌ ಆಯಿತು. ನಂತರದ ಎರಡೇ ದಿನದಲ್ಲಿ ಹುಡುಗ ‘ನಾನು ಮಹಾಲಕ್ಷ್ಮಿಯನ್ನು ಸುತಾರಾಂ ಮದುವೆಯಾಗೋದಿಲ್ಲ’ ಅಂದುಬಿಟ್ಟ. ಪಕ್ಕ ಚುಕ್ಕ ಸಿನಿಮಾದ ಫಸ್ಟ್‌ ಇಂಪ್ರೆಷನ್‌ ತನಗೆ ಇಷ್ಟೊಂದು ಖಾರವಾಗುತ್ತದೆ ಅಂತ ಮಹಾಲಕ್ಷ್ಮಿ ನಿರೀಕ್ಷಿಸಿರಲಿಲ್ಲ.

ಅತ್ತ ಸಿನಿಮಾ ಕೆರಿಯರ್ರಲ್ಲೂ ಭರವಸೆ ಹುಟ್ಟಿಸದ, ಇತ್ತ ನಿಶ್ಚಯವಾಗಿದ್ದ ತನ್ನ ಮದುವೆಯನ್ನೂ ಮುರಿದ ನಾರಾಯಣ್‌ ಚಿತ್ರವನ್ನು ಮನಸ್ಸಿನಲ್ಲೇ ಶಪಿಸುತ್ತಾ ಮಹಾಲಕ್ಷ್ಮಿ ಹಾಡುತ್ತಿರುವ ಶೋಕಗೀತೆ ಯಾರ ಕಿವಿಗಾದರೂ ಬಿದ್ದೀತೆ?

ಕೊಸರು : ಪಕ್ಕ ಚುಕ್ಕದಂಥ ತರ್ಕ ರಹಿತ, ಸಿಲ್ಲಿ ನಗೆ ಚಿತ್ರಕ್ಕೆ ಸಪೋರ್ಟ್‌ ಕೊಟ್ಟಿರುವ ಕಾರಣಕ್ಕೆ ನಟ ರಮೇಶ್‌ ಕೂಡ ಸಾಕಷ್ಟು ಟೀಕಾಂಬುಗಳನ್ನು ಎದುರಿಸುತ್ತಿದ್ದಾರೆ. ಮೊದಲೇ ಸೋತು ಸೊರಗಿದ್ದ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಸೋಲಿನ ನಡುವೆಯೂ ಉದಯ ಟಿವಿಯವರಿಂದ ಇನ್ನೊಂದು ಧಾರಾವಾಹಿಗೆ ಸ್ಲಾಟ್‌ ಗಿಟ್ಟಿಸಿಕೊಂಡಿರುವ ಕಾರಣಕ್ಕೆ ಎಸ್‌.ನಾರಾಯಣ್‌ ಎಂದಿನ ಪೋಸಲ್ಲೇ ನಗುತ್ತಿದ್ದಾರೆ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada