ಬಾಲಿವುಡ್ ಚಿತ್ರದಲ್ಲಿ ಕೊಡಗಿನ ಬೆಡಗಿ 'ನಿಧಿ ಸುಬ್ಬಯ್ಯ'

ಸೂಪರ್ ಹಿಟ್ ಗುಜರಾತಿ ನಾಟಕ ಪರೇಶ್ ರಾವಲ್‌ರ 'ಕಂಜಿ ವಿರುದ್ಧ್ ಕಂಜಿ' (ಹಿಂದಿಯಲ್ಲಿ 'ಕೃಷ್ಣ ವರ್ಸಸ್ ಕನ್ಹಾರಿಯಾ'), ಆಧರಿಸಿದ ಚಿತ್ರ 'ಓ ಮೈ ಗಾಡ್'. ಇದು ದೇವರು ಮತ್ತು ನಾಸ್ತಿಕನ ನಡುವಿನ ಕಥೆಯನ್ನು ಒಳಗೊಂಡಿರುವ ಚಿತ್ರ. ದೇವರ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕನ್ನಡದ ನಿಧಿಗೆ ಈ ಚಿತ್ರದಲ್ಲಿ ಅದೃಷ್ಟ ಹುಡುಕಿಕೊಂಡು ಬಂದಿದೆ.
ಈ ಮೊದಲೇ ನಿಧಿಗೆ ಬಾಲಿವುಡ್ ನಲ್ಲಿ ಒಂದು ಅವಕಾಶ ಬಂದಿತ್ತು. ಅದು ಕನ್ನಡದ ದೂದ್ ಪೇಡಾ ಖ್ಯಾತಿಯ ದಿಗಂತ್ ಜೋಡಿಯಾಗಿ ಮಣಿಶಂಕರ್ ನಿರ್ದೆಶನದ 'ಜಾಜ್' ಚಿತ್ರದಲ್ಲಿ. ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ಆದರೆ ದಿಗಂತ್ ಗೆ ಕೈಕೊಟ್ಟ ಅದೃಷ್ಟ ನಿಧಿ ಕೈ ಹಿಡಿದಿದೆ. ಖುಷಿಯಿಂದ ನಿಧಿ, 'ಓ ಮೈ ಗಾಡ್!' ಎಂದು ಉದ್ಗರಿಸಿದ್ದಾರೆ. ಸದ್ಯದಲ್ಲೇ ಮುಂಬೈ ಫ್ಲೈಟ್ ಏರಲಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Nidhi Subbaiah acts in Bollywood movie 'Oh My God. Bollywood actor Akshay Kumar will be the Hero. Umesh Shukla Direction


Click it and Unblock the Notifications











