For Quick Alerts
  ALLOW NOTIFICATIONS  
  For Daily Alerts

  ನಟಿ ರಿಷಿಕಾ ಸಿಂಗ್ ಸುತ್ತ ಬೆತ್ತಲೆ ಫೋಟೋ ವಿವಾದ

  |

  ಕನ್ನಡ ನಟಿ ರಿಷಿಕಾ ಸಿಂಗ್ ಇದೀಗ ವಿವಾದಕ್ಕೆ ಈಡಾಗಿದ್ದಾರೆ. ನಿರ್ದೆಶಕ ರಾಜೇಂದ್ರ ಸಿಂಗ್ ಬಾಬು ಮಗಳು ರಿಷಿಕಾ ಸಿಂಗ್ ಬಷೀದ್ ನಿರ್ದೇಶನದ 'ಯಾರಾದ್ರೆ ನನಗೇನು' ಎನ್ನುವ ಹೊಸ ಚಿತ್ರದ ಮುಹೂರ್ತದ ಫೋಟೋದಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧ ಎಂಬುದು ಮಹಿಳಾ ಆಯೋಗದ ದೂರು. ಈ ವಿಷಯವೀಗ ಖಾಸಗಿ ವಾಹಿನಿಯಲ್ಲಿ ಚರ್ಚೆಗೆ ಗುರಿಯಾಗಿದೆ.

  ಆದರೆ, ಈ ಕುರಿತು ರಿಷಿಕಾ "ಸಿನಿಮಾದ ಪಾತ್ರಕ್ಕೆ ತಕ್ಕಂತೆ ನಾವು ಕಾಣಿಸಿಕೊಳ್ಳಬೇಕಾಗುತ್ತದೆ, ಕಾಣಿಸಿಕೊಂಡಿದ್ದೇನೆ. ಅಷ್ಟಕ್ಕೂ ಫೋಟೋದಲ್ಲಿ ನನ್ನ ಅಂಗಾಂಗಗಳು ಕಾಣಿಸುತ್ತಿಲ್ಲ, ಬದಲಿಗೆ ಫ್ಲಾಟ್ ನಲ್ಲಿ ಡಿಸೈನ್ ಇದೆ. ಸಹಜವಾಗಿ ಹೆಣ್ಣುಮಕ್ಕಳು ಬಗಿಬಟ್ಟೆ ಧರಿಸಿದರೆ ಕಾಣಿಸುವಷ್ಟೂ ಕೂಡ ಅಲ್ಲೇನೂ ಕಾಣಿಸುತ್ತಿಲ್ಲ" ಎಂದು ಸ್ಟಪ್ಟೀಕರಣ ನೀಡಿದ್ದಾರೆ.

  ಚಿತ್ರದ ನಿರ್ದೇಶಕ ಬಷೀದ್ ಕೂಡ ಚಿತ್ರಕ್ಕೆ ಅಗತ್ಯವಾಗಿದ್ದರಿಂದ ಈ ರೀತಿಯ ಫೋಟೋ ಜಾಹೀರಾತಿನಲ್ಲಿ ಹಾಕಿದ್ದೇವೆ. ಈಗ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಬಾಲಿವುಡ್ ಚಿತ್ರ 'ದಿ ಡರ್ಟಿ ಪಿಕ್ಚರ್ಸ್' ನಲ್ಲಿ ವಿದ್ಯಾ ಬಾಲನ್ ಕಾಣಿಸಿಕೊಂಡಿದ್ದಕ್ಕಿಂತ ಹೆಚ್ಚು ಅಶ್ಲೀಲವಾಗಿ ಕಾಣಿಸುವಂತಿದ್ದು ಈ ಚಿತ್ರದಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ.

  ವಾದ-ವಿವಾದ ಇನ್ನೂ ಕಾವೇರುವ ಹಂತದಲ್ಲಿದೆ. ರಿಷಿಕಾ ಸಿಂಗ್ ಜಾಹೀರಾತು ಫೋಟೋ ಮೇಲೆ ಮಹಿಳಾ ಆಯೋಗದ ಕೆಂಗಣ್ಣು ಬಿದ್ದಿದೆ. ಸದ್ಯಕ್ಕಂತೂ ಈ ವಿಷಯ ಬಸಿಬಿಸಿ ಚರ್ಚೆಗೆ ಕಾರಣವಾಗಿದೆ. ಮೊನ್ನೆ ತಾನೇ ಪೂಜಾ ಗಾಂಧಿ, ದಂಡುಪಾಳ್ಯದಲ್ಲಿ ತೋರಿಸಿದ ಅರೆಬೆತ್ತಲೆ ಪ್ರದರ್ಶನಕ್ಕೆ ತೀವ್ರ ಚರ್ಚೆ ನಡೆದಿತ್ತು. ಇದೀಗ ರಿಷಿಕಾ ಆ ಪಟ್ಟಿಗೆ ಸೇರಿದ್ದಾರೆ. ಜೊತೆಗೆ ಸಿಸಿಎಲ್ ಕ್ಯಾಲೆಂಡರಿನಲ್ಲಿ 'ಟೂ ಫೀಸ್'ನಲ್ಲಿ ಕಾಣಿಸಿಕೊಂಡ ನಿಧಿ ಸುಬ್ಬಯ್ಯ ಹಾಗೂ ಐಂದ್ರಿತಾ ರೇ ಬಗ್ಗೆ ಚರ್ಚೆ, ರಾಗಿಣಿ ರಾಗಾಲಾಪ.

  ಈ ವಾದ-ವಿವಾದ ಕುರಿತು "ಜಾಹೀರಾತು ಇರುವುದೇ ಪ್ರದರ್ಶನಕ್ಕಾಗಿ. ಚಿತ್ರದ ಕಥೆಗೆ ಸಂಬಂಧಿಸಿಯೇ ಜಾಹೀರಾತು ಮಾಡಬೇಕಾಗುತ್ತದೆ. ಪಾತ್ರಕ್ಕೆ ತಕ್ಕಂತೆ ಕಲಾವಿದರು ಕಾಣಿಸಿಕೊಳ್ಲಬೇಕಾಗುತ್ತದೆ. ಸಿನಿಮಾಕ್ಕೆ ಸಂಬಂಧಿಸಿದಂತೆ ಬಿಡುಗಡೆಗಿಂತ ಮೊದಲು ನೋಡಿ ಮಾತನಾಡಲು ಸೆನ್ಸಾರ್ ಮಂಡಳಿ ಇದೆ. ಆದರೆ ಮಧ್ಯದಲ್ಲಿ 'ಥಕಥೈ' ಎಂದು ಕುಣಿಯುವ ಅಗತ್ಯ ಮಹಿಳಾ ಆಯೋಗಕ್ಕೆ ಏನಿದೆ" ಎಂಬುದು ಸಾರ್ವಜನಿಕರ ಪ್ರಶ್ನೆ? (ಒನ್ ಇಂಡಿಯಾ ಕನ್ನಡ)

  English summary
  Actress Rishika Singh Movie Advertisement of Bashid Movie 'Yaradre Nanagenu' photo became controversy now. Mahila Ayoga Complaints that is nude and against Indian Culture. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X