»   » ಜನವರಿ 15ರ ನಂತರ ಐಶೂ ಮಗಳ ನಾಮಕರಣ

ಜನವರಿ 15ರ ನಂತರ ಐಶೂ ಮಗಳ ನಾಮಕರಣ

Posted By:
Subscribe to Filmibeat Kannada

ಐಶ್ವರ್ಯ ರೈ ಮಗುವಿಗೆ ಜನವರಿ 15ರ ನಂತರ ಹೆಸರು ಬರಲಿದೆ. ಅಲ್ಲಯವೆರೆಗೆ ಬಚ್ಚನ್ ಕುಟುಂಬ ಕರೆಯುತ್ತಿರುವಂತೆ 'ಬೇಟಿ ಬಿ' ಎಂದು ಎಲ್ಲರೂ ಕರೆಯಬಹುದು. ಇಂಗ್ಲಿಷ್ ಅಕ್ಷರ 'A' ಯಿಂದ ಪ್ರಾರಂಭವಾಗುವುದು ಪಕ್ಕಾ ಎಂದಿದ್ದಾರೆ ಅಭಿಷೇಕ್. ಹೊಸ ವಿಷಯವೆಂದರೆ 15ರ ನಂತರ ಗ್ರಾಂಡ್ ಫಂಕ್ಷನ್ ಮೂಲಕ ಮಗುವಿಗೆ ಹೆಸರಿಡಲಾಗುವುದಂತೆ.

ಜಗತ್ತೆಲ್ಲ ಕುತೂಹಲದಿಂದ ಕಾಯುತ್ತಿರುವ ಈ ಕ್ಷಣವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿಲು ಈಗಾಗಲೇ ಬಚ್ಚನ್ ಕುಟುಂಬ ನಿರ್ಧರಿಸಿದೆ. ಆದರೆ ಐಶ್ವರ್ಯಾ ರೈ ಮಾತ್ರ ಹೆಸರಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಮಗುವನ್ನು ಪೋಷಿಸುವುರಲ್ಲಿ ಮಗ್ನರಾಗಿದ್ದಾರಂತೆ.

ಅಭಿಮಾನಿಗಳೆಲ್ಲಾ ಅಭಿಯನ್ನು ಈಗಲೇ ಹೆಸರು ಹೇಳಿಬಿಡಿ ಎಂದು ದುಂಬಾಲುಬಿದ್ದರೂ ಹೇಳದೇ ದಯವಿಟ್ಟು 15ರ ತನಕ ಸಹನೆಯಿರಲಿ ಎಂದಿದ್ದಾರೆ. ಜೊತೆಗೆ ಮಗು ಸ್ವಲ್ಪ ದೊಡ್ಡದಾದ ತಕ್ಷಣ ಐಶ್ವರ್ಯ ರೈ ಮತ್ತೆ ನಟಿಸಲಿದ್ದಾರೆ ಎಂಬುದನ್ನು ಕೂಡ ದೃಢಪಡಿಸಿದ್ದಾರೆ. ಐಶೂ ಅಭಿಮಾನಿಗಳಿಗೂ ಈಗ ಡಬಲ್ ಖುಷಿ. (ಏಜೆನ್ಸೀಸ್)

English summary
Bachchan Family decided to have grand naming ceremony of Aishwarya Rai and Abhishek Bachchan Daughter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada