»   » ಬಾಕ್ಸಾಫೀಸ್ ಗಳಿಕೆಯಲ್ಲಿ ಹೂಂಕರಿಸಿದ 'ಆಪ್ತರಕ್ಷಕ'

ಬಾಕ್ಸಾಫೀಸ್ ಗಳಿಕೆಯಲ್ಲಿ ಹೂಂಕರಿಸಿದ 'ಆಪ್ತರಕ್ಷಕ'

Posted By:
Subscribe to Filmibeat Kannada

ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಮನೋಜ್ಞ ಚಿತ್ರ 'ಆಪ್ತರಕ್ಷಕ' ಅರ್ಧ ಶತಕ ಬಾರಿಸಿದೆ. ಈ ಮೂಲಕ ವರ್ಷದ ಮೊದಲ ಹಿಟ್ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ರಾಜ್ಯದ 75 ಕೇಂದ್ರಗಳಲ್ಲಿ 'ಆಪ್ತರಕ್ಷಕ' ಐವತ್ತು ದಿನಗಳನ್ನು ಪೂರೈಸಿದ್ದು ಬಾಕ್ಸಾಫೀಸ್ ಗಳಿಕೆಯಲ್ಲಿ ಹೂಂಕರಿಸಿದೆ. ಬೇಸಿಗೆ ರಜಾ ದಿನಗಳಲ್ಲಿ ಗಳಿಕೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ.

ಕಳೆದ ಒಂದು ತಿಂಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹಾಗೂ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳ ನಡುವೆಯೂ ಬಾಕ್ಸಾಫೀಸಲ್ಲಿ ಆಪ್ತರಕ್ಷಕನ ಅಬ್ಬರ ಜೋರಾಗಿಯೇ ಇದೆ ಎನ್ನುತ್ತವೆ ಮೂಲಗಳು. ಏತನ್ಮಧ್ಯೆ ತೆಲುಗಿನಲ್ಲಿ ವೆಂಕಟೇಶ್ ಮತ್ತು ಅನುಷ್ಕಾ ಶೆಟ್ಟಿ ಮುಖ್ಯಪಾತ್ರದಲ್ಲಿರುವ 'ಆಪ್ತರಕ್ಷಕುಡು' ಏಪ್ರಿಲ್ ತಿಂಗಳಲ್ಲೆ ಸೆಟ್ಟೇರಲಿದೆ.

ಸಿನಿಮಾ ಪಂಡಿತರ ಪ್ರಕಾರ,ಆಪ್ತರಕ್ಷಕ ಗಳಿಕೆ ರು.15 ಕೋಟಿ ಎನ್ನಲಾಗಿದೆ. ಸುಮಾರು ರು.10 ಕೋಟಿಯಷ್ಟು ಹಣ ಚಿತ್ರಮಂದಿರದ ಬಾಡಿಗೆ ಎಂದು ಲೆಕ್ಕ ಹಾಕಿದರೂ ಆಪ್ತರಕ್ಷಕನ ಒಟ್ಟು ಗಳಿಕೆ ರು.25 ಕೋಟಿ ಎಂದಾಗುತ್ತದೆ. ರಾಜ್ಯದಾದ್ಯಂತ ದಿನವೊಂದಕ್ಕೆ 275 ಪ್ರದರ್ಶನಗಳನ್ನು ಆಪ್ತರಕ್ಷಕ ಕಾಣುತ್ತಿದೆ. ಬೆಂಗಳೂರಿನ 14 ಚಿತ್ರಮಂದಿರಗಳಲ್ಲಿ ಕನಕವೃಷ್ಟಿ ಯಾಗುತ್ತಿದೆ.

ಆಪ್ತರಕ್ಷಕ ಐವತ್ತು ದಿನಗಳನ್ನು ಪೂರೈಸಿದ ನಿಮಿತ್ತ ವಿಷ್ಣು ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ವಿಷ್ಣು ಕಟೌಟ್ ಗೆ ಕ್ಷೀರಾಭಿಷೇಕ, ಮಾಲಾರ್ಪಣೆ ಹಾಗೂ ಪಟಾಕಿ ಸಿಡಿಸುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ತುಂಬು ಅಭಿಮಾನವನ್ನು ಮೆರೆದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada