»   » ಕೆಎಫ್ ಸಿಸಿಯಲ್ಲಿ ಇನ್ಮುಂದೆ ಬಸಂತಕಾಲ

ಕೆಎಫ್ ಸಿಸಿಯಲ್ಲಿ ಇನ್ಮುಂದೆ ಬಸಂತಕಾಲ

Posted By:
Subscribe to Filmibeat Kannada

ಶನಿವಾರ(ಮೇ.8) ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್ ಸಿಸಿ) ಚುನಾವಣೆಯಲ್ಲಿ ನಿರೀಕ್ಷೆಯಂತೆ ನಿರ್ಮಾಪಕ, ವಿತರಕ, ನಟ ಬಸಂತ್ ಕುಮಾರ್ ಪಾಟೀಲ್ ಅವರು ಜಯಭೇರಿ ಬಾರಿಸಿ, ಅಧ್ಯಕ್ಷ ಸ್ಥಾನದ ಪಟ್ಟ ಅಲಂಕರಿಸಲಿದ್ದಾರೆ. ಹಿರಿಯ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ಜಾನಕೀರಾಮ್ ಅವರನ್ನು ಸೋಲಿಸಿದ ಬಸಂತ್, ಗೆಲುವಿನ ನಗೆ ಬೀರಿದರು.

'ಇದು ನನ್ನ ಧರ್ಮಕ್ಕೆ ಸಂದ ಜಯ. ನನ್ನ ತಂಡಕ್ಕೆ ಸಿಕ್ಕ ಗೆಲುವು. ತುಂಬಾ ಖುಷಿಯಾಗಿದೆ. ಇಂದಿನಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಕನ್ನಡ ಚಿತ್ರೋದ್ಯಮದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತೇನೆ' ಎಂದು ನೂತನ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಹರ್ಷದಿಂದ ಹೇಳಿದರು.

ಒಟ್ಟು ಚಲಾವಣೆಗೊಂಡ 1,236 ಮತಗಳಲ್ಲಿ ಬಸಂತ್ 759 ಮತಗಳನ್ನು ಪಡೆದರು. ವಿಜಯ್ ಕುಮಾರ್ 310 ಹಾಗೂ ಜಾನಕಿರಾಮ್ 167 ಮತಗಳನಷ್ಟೇ ಪಡೆದು ಸೋಲುಂಡರು. ಪಾರ್ವತಮ್ಮ ರಾಜಕುಮಾರ್, ರವಿಚಂದ್ರನ್, ಜಗ್ಗೇಶ್ ಸೇರಿದಂತೆ ಚಿತ್ರರಂಗದ ಹಿರಿಯರು ಮತದಾನ ಮಾಡಿದರು.

ಉಳಿದಂತೆ ಫಲಿತಾಂಶ ಇಂತಿದೆ:
ಉಪಾಧ್ಯಕ್ಷಸ್ಥಾನ: ಹನುಮಂತರಾಯ( ಪ್ರದರ್ಶಕ ವಲಯ),,ಕೆ. ಮಂಜು ( ವಿತರಕ ವಲಯ), ಬಿಎನ್ ಗಂಗಾಧರ್ (ನಿರ್ಮಾಪಕ ವಲಯ), ಕಾರ್ಯದರ್ಶಿಸ್ಥಾನ:ನರಸಿಂಹಲು(ವಿತರಕ), ವೆಂಕಟೇಶ ಮೂರ್ತಿ(ಪ್ರದರ್ಶಕ), ಎ ಗಣೇಶ್ ( ನಿರ್ಮಾಪಕ), ಖಜಾಂಚಿಯಾಗಿ ಚಿನ್ನೇಗೌಡ ಅವಿರೋಧವಾಗಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರು: ಕರಿಸುಬ್ಬು, ಗೋವಿಂದರಾಜ್, ರಾಕ್ ಲೈನ್ ವೆಂಕಟೇಶ್, ನಾಗಣ್ಣ, ಸಾರಾ ಗೋವಿಂದು, ಅಣಜಿ ನಾಗರಾಹ್, ಉಮೇಶ್ ಬಣಕಾರ್, ಟಿಕೆ ರಾಮಕೃಷ್ಣ ಅಲಿಯಾಸ್ ಪ್ರವೀಣ್ ಕುಮಾರ್ (ಎಲ್ಲರೂ ನಿರ್ಮಾಪಕ ವಲಯ). ನವಯುಗ ಶ್ರೀ ನಾರಾಯಣ ರೆಡ್ಡಿ, ವಿಎಸ್ ಸುರೇಶ್, ವಿಜಯಕುಮಾರ್, ಟಿ ನಾರಾಯಣರೆಡ್ಡಿ, ಕೆಸಿ ನಾಗರಾಜ್, ಸಿ. ನಾಗರಾಜ್, ಆರ್ .ಗಣೇಶ್, ಪ್ರಕಾಶ್, ಮಧುಸೂದನ್ ಗೌಡ ಮುಂತಾದವರು (ಎಲ್ಲರೂ ವಿತರಕ ವಲಯ). ಪ್ರದರ್ಶಕ ವಲಯದಿಂದ ಚಂದ್ರಶೇಖರ್, ಜಯರಾಮರೆಡ್ಡಿ, ತಿಮ್ಮಯ್ಯ, ಶೆಟ್ಟಿ ಹೊನ್ನಪ್ಪ, ರಮಾನಾಥ್ ಮುಂತಾದವರು ಆಯ್ಕೆಯಾಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada