Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್ ಎಫ್‌ಎಂ 92.7ನಿಂದ 'ಬಿಗ್ ಕನ್ನಡ ಚಲನಚಿತ್ರ ಪ್ರಶಸ್ತಿ'
ರಿಲಯನ್ಸ್ ಒಡೆತನದ 92.7 ಬಿಗ್ ಎಫ್ ಎಂ ರೇಡಿಯೋ "ಬಿಗ್ ಕನ್ನಡ ಚಲನಚಿತ್ರ ಪ್ರಶಸ್ತಿ"ಗಳನ್ನು ನೀಡಲು ಮುಂದಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಚಲನಚಿತ್ರ, ಸಂಗೀತ, ಕಿರುತೆರೆ, ನೃತ್ಯ, ರಂಗಭೂಮಿ ಹಾಗೂ ಕ್ರೀಡಾ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ನಾಲ್ಕು ಜನಪ್ರಿಯ ಪ್ರಶಸ್ತಿಗಳಿಗೆ ಅರ್ಹರನ್ನು ಮತದಾನದ ಮೂಲಕಆಯ್ಕೆ ಮಾಡುವ ಅವಕಾಶವನ್ನು ಜನಸಾಮಾನ್ಯರಿಗೆ ಬಿಗ್ ಎಫ್ ಎಂ ನೀಡುತ್ತಿದೆ. ಚಲನಚಿತ್ರ ವಿಭಾಗಕ್ಕೆ ಮಾತ್ರ ಈ ಅವಕಾಶ ಸೀಮಿತವಾಗಿದೆ. ಉಳಿದ ವಿಭಾಗಗಳ ಅರ್ಹರ ಆಯ್ಕೆ ತೀರ್ಪುಗಾರರಿಗೆ ಬಿಟ್ಟ ವಿಚಾರ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಬಿಗ್ ಎಫ್ ಎಂ ರೇಡಿಯೋದ ನಾಲ್ಕು ಜನಪ್ರಿಯ ಪ್ರಶಸ್ತಿಗಳು ಹೀಗಿವೆ, ವರ್ಷದ ಬಿಗ್ ಚಿತ್ರ (ನಾಲ್ಕು ಚಿತ್ರಗಳು ನಾಮಾಂಕಿತ). ವರ್ಷದ ಬಿಗ್ ಸಂಗೀತ ನಿರ್ದೇಶಕ (ಕಣದಲ್ಲಿ ಐದು ಮಂದಿ ಇರುತ್ತಾರೆ). ವರ್ಷದ ಬಿಗ್ ಹಾಡು (ಸ್ಪರ್ಧೆಯಲ್ಲಿ ಐದು ಹಾಡುಗಳಿರುತ್ತವೆ). ಇವರನ್ನು ಆಯ್ಕೆ ಮಾಡುವ ಅವಕಾಶ ಜನಸಾಮಾನ್ಯರ ಕೈಯಲ್ಲಿರುತ್ತದೆ.
ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ನಟ, ಅತ್ಯುತ್ತಮ ಖಳನಟ ಸೇರಿದಂತೆ ಅತ್ಯುತ್ತಮ ಹಿನ್ನೆಲೆ ಗಾಯಕ/ಗಾಯಕಿ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಶಾಸ್ತ್ರೀಯ ಸಂಗೀತ, ಅತ್ಯುತ್ತಮ ಶಾಸ್ತ್ರೀಯ ನೃತ್ಯ, ಅತ್ಯುತ್ತಮ ವಾದ್ಯ ಕಲಾವಿದ ಹಾಗೂ ಅತ್ಯುತ್ತಮ ರಂಗ ಕಲಾವಿದ ಪ್ರಶಸ್ತಿಗಳನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ.
ಕಿರುತೆರೆ: ವರ್ಷದ ಅತ್ಯುತ್ತಮ ಮನರಂಜನಾತ್ಮಕ ಟಿವಿ, ವರ್ಷದ ಅತ್ಯುತ್ತಮ ಟಾಕ್ ಶೋ, ವರ್ಷದ ಅತ್ಯುತ್ತಮ ಕಿರುತೆರೆ ನಟ, ವರ್ಷದ ಅತ್ಯುತ್ತಮ ಕಿರುತೆರೆ ನಟಿ, ವರ್ಷದ ಅತ್ಯುತ್ತಮ ರಿಯಾಲಿಟಿ ಶೋ ಪ್ರಶಸ್ತಿಗಳನ್ನು ಕಿರುತೆರೆ ವಿಭಾಗದಲ್ಲಿ ನೀಡಲಾಗುತ್ತದೆ.
ಈ ಪ್ರಶಸ್ತಿ ಕುರಿತು ರಾಜ್ಯದಾದ್ಯಂತ ಪ್ರಚಾರ ನೀಡಲು ಬಿಗ್ ಎಫ್ ಎಂ ರೇಡಿಯೋ ನಿರ್ಧರಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಯುಗಾದಿ ಹಬ್ಬದ ದಿನ ನಡೆಯಲಿದೆ. ಬಳಿಕ ಈ ಕಾರ್ಯಕ್ರಮ ಈಟಿವಿ ಕನ್ನಡದಲ್ಲಿ ಪ್ರಸಾರ ಭಾಗ್ಯ ಕಾಣಲಿದೆ. ಮಾಸ್ಟರ್ ಹಿರಣ್ಣಯ್ಯ, ಪ್ರಣಯರಾಜ ಶ್ರೀನಾಥ್ ಹಾಗೂ ನೃತ್ಯ ಕಲಾವಿದೆ ಪದ್ಮಿನಿ ರವಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಕೇಂದ್ರಗಳಿಂದ ಮತಸಂಗ್ರಹ ಕಾರ್ಯ ನಡೆಯಲಿದೆ.