»   » ಏಪ್ರಿಲ್‌ನಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹಂಗಾಮ

ಏಪ್ರಿಲ್‌ನಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹಂಗಾಮ

Posted By:
Subscribe to Filmibeat Kannada

ಕಡೆಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ಗೆ ಮುಹೂರ್ತ ನಿಗದಿಯಾಗಿದೆ. ಈ ಹಿಂದೆ ಜನವರಿ 2011ರಿಂದ ಶುರುವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆ ಮಾತು ಸುಳ್ಳಾಯಿತು. ಫೆಬ್ರವರಿ ಕೊನೆಗೆ ಖಂಡಿತ ಶುರವಾಗಲಿದೆ ಎಂಬ ಮಾತೂ ಅರ್ಥ ಕಳೆದುಕೊಂಡಿತು. ಏಪ್ರಿಲ್‍ನಿಂದ ಸಿಸಿಎಲ್ ಪಂದ್ಯಾವಳಿ ನಡೆಯುವುದು ಪಕ್ಕಾ ಎಂದಿದ್ದಾರೆ 'ಕರ್ನಾಟಕ ಬುಲ್‌ಡೋಜರ್ಸ್' ತಂಡದ ನಾಯಕ ಕಿಚ್ಚ ಸುದೀಪ್.

ಈಗಾಗಲೆ ಪ್ರಾಕ್ಟೀಸ್ ಕೂಡ ಆರಂಭವಾಗಿದ್ದು ಕನ್ನಡ ಸಿನಿಮಾ ತಾರೆಗಳು ಅರಮನೆ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಅಶೋಕ್ ಖೇಣಿ ಕನ್ನಡ ಸಿನಿಮಾ ತಾರೆಗಳ ತಂಡವನ್ನು ರು.17 ಕೋಟಿಗೆ ಖರೀದಿಸಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಬೆಳಗ್ಗೆ 6.15ರಿಂದ ವಾರದಲ್ಲಿ ಮೂರು ದಿನ ಪ್ರಾಕ್ಟೀಸ್ ಭರದಿಂದಸಾಗುತ್ತಿದೆ.

ಈ ಹಿಂದೆ ಕರ್ನಾಟಕ ತಂಡಕ್ಕೆ 'ಬೆಂಗಳೂರು ರಾಯಲ್ಸ್' ಎಂದು ಹೆಸರಿಡಲಾಗಿತ್ತು. ಬಳಿಕ ಅದನ್ನು 'ಕರ್ನಾಟಕ ಬುಲ್ಡೋಜರ್ಸ್' ಎಂದು ಮರುನಾಮಕರಣ ಮಾಡಿದ್ದಾರೆ ಅಶೋಕ್ ಖೇಣಿ. ಮುಂಬೈ ಬಾಲಿವುಡ್ ತಂಡಕ್ಕೆ ನಾಯಕನಾಗಿರುವ ಸಲ್ಮಾನ್ ಖಾನ್ ಅವರ ತಂಡವನ್ನು ಮಣ್ಣುಮುಕ್ಕಿಸುವ ಶಪಥವನ್ನು ಖೇಣಿ ತೊಟ್ಟಿದ್ದಾರೆ.

English summary
The Celebrity cricket League (CCL T20) starts from April 2011confirmed Kichcha Sudeep who heads the ‘Karnataka Bulldozers’ team as captain. Meanwhile the Kannada film actors practicing the match from morning 6.15 am for three hours at Bangalore Palace.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada