»   »  ಪ್ರಭುದೇವಾ ಮತ್ತು ನಯನತಾರ ರಹಸ್ಯ ಮದುವೆ?

ಪ್ರಭುದೇವಾ ಮತ್ತು ನಯನತಾರ ರಹಸ್ಯ ಮದುವೆ?

Subscribe to Filmibeat Kannada
Nayanthara
ಭಾರತ ಮೈಕೇಲ್ ಜಾಕ್ಸನ್ ಎಂದೇ ಬಿರುದಾಂಕಿತನಾಗಿರುವ ಪ್ರಭುದೇವಾ ಮತ್ತು ಗ್ಲಾಮರ್ ಗೊಂಬೆ ನಯನತಾರಾ ರಹಸ್ಯವಾಗಿ ಮದುವೆಯಾಗಿದ್ದಾರೆ! ಇವರಿಬ್ಬರೂ ಹೈದರಾಬಾದಿನಲ್ಲಿ ಒಬ್ಬೊರಿಗೊಬ್ಬರು ಹಾರ ಬದಲಾಯಿಸಿಕೊಂಡಿದ್ದಾರೆ ಎಂಬ ಸುದ್ದಿ ತಮಿಳು, ತೆಲುಗು ಚಿತ್ರರಂಗದಲ್ಲಿ ಸ್ಫೋಟಗೊಂಡಿದೆ. ಅತ್ತ ತೆಲುಗು ಇತ್ತ ತಮಿಳು ಚಿತ್ರರಂಗದ ನಾಲಿಗೆ ಮೇಲೆ ನಲಿದಾಡುತ್ತಿದೆ.

ಆದರೆ ಇದೆಲ್ಲಾ ಅಪ್ಪಟ ಸುಳ್ಳು ಎನ್ನುತ್ತಿದ್ದಾರೆ ನಯನ ತಾರಾ. ಸದ್ಯಕ್ಕೆ ಪ್ರಭು ಮತ್ತು ನಯನತಾರಾ 'ವಿಲ್ಲು' ಎಂಬ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಆಗಿನಿಂದಲೂ ಇವರಿಬ್ಬರ ನಡುವೆ ಹೊಸ ಸ್ನೇಹ ಸಂಪರ್ಕ ಏರ್ಪಟ್ಟಿದೆ. ಆ ಸ್ನೇಹ ಕೊಂಚ ಹಳಿ ತಪ್ಪಿ ಮದುವೆಯಲ್ಲಿ ಅಂತ್ಯವಾಗಿದೆ ಎನ್ನುತ್ತಿವೆ ಮೂಲಗಳು.

ಪ್ರಭುದೇವ ಅವರಿಗೆ ಈಗಾಗಲೇ ಮದುವೆಯಾಗಿದೆ. ಅವರು ಮೂರು ಮಕ್ಕಳ ತಂದೆ. ಅವರು ಹಿರಿಯ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ.ಈ ನೋವನ್ನು ಮರೆಸಲು ನಯನ ತಾರಾ ಅವರಿಗೆ ಮತ್ತಷ್ಟು ಸನಿಹವಾಗಿ ಮದುವೆಯನ್ನೂ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ದಟ್ಟ ಹೊಗೆಯನ್ನೇ ಎಬ್ಬಿಸಿದೆ!

ಈ ಬಗ್ಗೆ ಪ್ರತಿಕ್ರಿಯಿಸಿರುವ ನಯನ ತಾರಾ, ರಹಸ್ಯವಾಗಿ ಮದುವೆಯಾಗುವ ಜರೂರತ್ತಾದರೂ ನನಗೇನಿದೆ. ಪ್ರಸ್ತುತ ನಾನು ಹೈದರಾಬಾದಿನಲ್ಲೇ ಇಲ್ಲ. ನನ್ನದು ಸಾದಾಸೀದಾ ಮಾತನಾಡುವ ಜಾಯಮಾನ. ಒಂದು ವೇಳೆ ಮದುವೆಯಾಗುವುದಿದ್ದರೆ ಮಾಧ್ಯಮಗಳಲ್ಲಿ ಅಧಿಕೃತವಾಗಿ ತಿಳಿಸಿಯೇ ಆಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada