For Quick Alerts
  ALLOW NOTIFICATIONS  
  For Daily Alerts

  'ಎದ್ದೇಳು ಮಂಜುನಾಥ' ಸನತ್‌ ಕಾಲು ತೆಗೆದ ವೈದ್ಯರು

  By Rajendra
  |
  ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿದ್ದ 'ಎದ್ದೇಳು ಮಂಜುನಾಥ' ಚಿತ್ರದ ನಿರ್ಮಾಪಕ ಸನತ್ ಕುಮಾರ್ ಅವರು ಕೆಲದಿನಗಳ ಹಿಂದೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಅವರು ಚಿಕಿತ್ಸೆಗಾಗಿ ಬೆಂಗಳೂರಿನ ಪ್ರಿಸ್ಟೈನ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಹಲವಾರು ಬಾರಿ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗಿರಲಿಲ್ಲ.

  ಕಡೆಗೆ ವಿಧಿಯಿಲ್ಲದೆ ಸನತ್ ಅವರ ಎಡಗಾಲಿನ ಸ್ವಲ್ಪ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿದ್ದು ಸತನ್ ಕುಮಾರ್ ಗಾಯಗೊಂಡಿದ್ದರು. ದಿವಂಗತ ಪತ್ರಕರ್ತ ಬಿ ವಿ ವೈಕುಂಠ ರಾಜು ಅವರ ಪುತ್ರ ಸನತ್ ಕುಮಾರ್. ಇನ್ನೂ ಪ್ರಿಸ್ಟೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

  ಚಿತ್ರ ನಿರ್ಮಾಣದ ಜೊತೆಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಸದ್ಯಕ್ಕೆ ಅವರು ಮಲಯಾಳಂನ ಚಿತ್ರವೊಂದನ್ನು ರೀಮೇಕ್ ಮಾಡುತ್ತಿದ್ದರು. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಒನ್‌ಇಂಡಿಯಾ ಕನ್ನಡ ಹಾರೈಸುತ್ತದೆ.

  English summary
  Eddelu Manjunatha Kannada film producer Sanath Kumar few days back fell down in Bangalore press club and injured. The doctors at Pristine Hospital were forced to cut off a portion of his left leg.
  Thursday, February 9, 2012, 16:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X