»   » ಚಿತ್ರಮಂದಿರಕ್ಕಾಗಿ ಗವಿಪುರ,ಎಕೆ 56, ತುಗಲಕ್ ಗುದ್ದಾಟ

ಚಿತ್ರಮಂದಿರಕ್ಕಾಗಿ ಗವಿಪುರ,ಎಕೆ 56, ತುಗಲಕ್ ಗುದ್ದಾಟ

Posted By:
Subscribe to Filmibeat Kannada

ಮೊದಲೇ ಚಿತ್ರಮಂದಿರಗಳ ಸಮಸ್ಯೆಯಿಂದ ಕಂಗಾಲಾಗಿರುವ ಕನ್ನಡ ಚಿತ್ರೋದ್ಯಮ ಈ ವಾರ ಮತ್ತಷ್ಟು ಹೈರಾಣಾಗಲಿದೆ. ಕಾರಣ ಸ್ಪಷ್ಟ. ಈ ವಾರ ನಾಲ್ಕು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಪಾರಿಜಾತ, ತುಗಲಕ್, ಗವಿಪುರ ಹಾಗೂ ಎಕೆ 56.

ಈಗಾಗಲೆ ಬಿಡುಗಡೆಯಾಗಿರುವ ಚಿಂಗಾರಿ, ಕೋ ಕೋ, 'ಆರಕ್ಷಕ' ಹಾಗೂ 'ಸಿದ್ಲಿಂಗು' ಚಿತ್ರಗಳು ಹೇಗೋ ಚಿತ್ರಮಂದಿರಗಳನ್ನು ಹೊಂದಾಣಿಕೆ ಮಾಡಿಕೊಂಡು ಹೆಣಗಾಡುತ್ತಿವೆ. ಈಗ ಇದ್ದಕ್ಕಿದ್ದಂತೆ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ರಾಜ್ಯದ ಬಹುತೇಕ ಚಿತ್ರಮಂದಿರಗಳನ್ನು 'ಚಿಂಗಾರಿ' ಚಿತ್ರ ಕಬಳಿಸಿದೆ. ಈ ವಾರ ಇನ್ನಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಯಲ್ಲೂ ಇದ್ದಾರೆ. ಈ ಮಧ್ಯೆ ಬಿಡುಗಡೆ ಕಾಣುತ್ತಿರುವ ಹೊಸಬರ ಚಿತ್ರಗಳ ಪಾಡಂತೂ ಕೇಳುವವರಿಲ್ಲ. ಕನ್ನಡ ಚಿತ್ರೋದ್ಯಮವೂ ಈ ಬಗ್ಗೆ ಎಚ್ಚೆತ್ತುಕೊಳ್ಳದಿರುವುದು ನಿಜಕ್ಕೂ ದುರಂತ. (ಒನ್‌ಇಂಡಿಯಾ ಕನ್ನಡ)

English summary
This week (Feb 10) four Kannada movie are releasing. Gavipura, Parijatha, AK 56 and Tughlaq movies are hitting screens. But these movies are facing theatere problem.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X