»   » ಬಿರುಸಿನ ಚಿತ್ರೀಕರಣದಲ್ಲಿ ಜಗ್ಗೇಶ್ 'ಲಿಫ್ಟ್ ಕೊಡ್ಲಾ'

ಬಿರುಸಿನ ಚಿತ್ರೀಕರಣದಲ್ಲಿ ಜಗ್ಗೇಶ್ 'ಲಿಫ್ಟ್ ಕೊಡ್ಲಾ'

Subscribe to Filmibeat Kannada

'ಲಿಫ್ಟ್ ಕೊಡ್ಲಾ' ಚಿತ್ರಕ್ಕೆ ಬೆಂಗಳೂರು ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಹಂತದ ಚಿತ್ರೀಕರಣದಲ್ಲಿ ಕೌಟುಂಬಿಕ ಸ್ವಾರಸ್ಯಕರ ಸನ್ನಿವೇಶಗಳೊಂದಿಗೆ ಸಾಹಸ ದೃಶ್ಯ ಕೂಡ ಚಿತ್ರೀಕರಣಗೊಂಡಿದೆ. ನಾಯಕ ಜಗ್ಗೇಶ್, ನಾಯಕಿ ಅರ್ಚನಾಗುಪ್ತಾ ಹಾಗೂ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂದು ನಿರ್ದೇಶಕ ಅಶೋಕ್ ಕಶ್ಯಪ್ ತಿಳಿಸಿದ್ದಾರೆ.

ಸಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ ಎಂ ಆರ್ ಶಂಕರ್‌ರೆಡ್ಡಿ ಅಪಾರ ವೆಚ್ಚದಲ್ಲಿ, ಅದ್ದೂರಿ ತಾರಾಗಣದೊಂದಿಗೆ ನಿರ್ಮಿಸುತ್ತಿರುವ ಈ ಚಿತ್ರ ವಿಭಿನ್ನ ಕಥಾ ಹಂದರ ಹೊಂದಿದೆ. ವಿ.ಮನೋಹರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಂನಾರಾಯಣ್ ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕರೇ ಛಾಯಾಗ್ರಹಣದ ನಿರ್ವಹಣೆ ಮಾಡುತ್ತಿದ್ದಾರೆ.

ಜಗ್ಗೇಶ್, ಕೋಮಲ್, ಅರ್ಚನಾಗುಪ್ತಾ, ಸುದರ್ಶನ್, ರಾಜುತಾಳಿಕೋಟೆ, ಕಿಲ್ಲರ್ ವೆಂಕಟೇಶ್, ಕಿಶೋರ್, ಶೋಭ್‌ರಾಜ್, ವಿ.ಮನೋಹರ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್ ಮುಂತಾದವರು ಚಿತ್ರದ ತಾರಾಗಣದಲಿದ್ದಾರೆ. ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada