»   »  'ವೈಕುಂಠ ಎಕ್ಸ್ ಪ್ರೆಸ್' ಹತ್ತಿದ ನವರಸ ನಾಯಕ

'ವೈಕುಂಠ ಎಕ್ಸ್ ಪ್ರೆಸ್' ಹತ್ತಿದ ನವರಸ ನಾಯಕ

Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅವರ ಮುಂದಿನ ಚಿತ್ರಕ್ಕೆ 'ವೈಕುಂಠ ಎಕ್ಸ್ ಪ್ರೆಸ್' ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕನಾಗಬೇಕೆಂಬ ಛಾಯಾಗ್ರಾಹಕಅಶೋಕ್ ಕಶ್ಯಪ್ ಅವರ ಕನಸು ನನಸಾಗುತ್ತಿದೆ. ನವೆಂಬರ್ 23ರಂದು 'ವೈಕುಂಠ ಎಕ್ಸ್ ಪ್ರೆಸ್' ಸೆಟ್ಟೇರುತ್ತಿರುವ ಚಿತ್ರಕ್ಕೆ ಶಂಕರ್ ರೆಡ್ಡಿ ನಿರ್ಮಾಪಕರು.

ಎರಡು ವರ್ಷಗಳ ಹಿಂದೆ ಆರಂಭವಾದ 'ಸಿಹಿ ಮುತ್ತು' ಎಂಬ ಚಿತ್ರ ಕಾರಣಾಂತರಗಳಿಂದ ನಿಂತು ಹೋಯಿತು. ನಿರ್ದೇಶಕನಾಗಬೇಕೆಂಬ ಕಶ್ಯಪ್ ಕನಸಿಗೆ 'ಸಿಹಿ ಮುತ್ತು' ಚಿತ್ರ ಕಹಿ ಮುತ್ತಾಗಿ ಪರಿಣಮಿಸಿತು. ನಿರ್ಮಾಪಕ ಶಂಕರರೆಡ್ಡಿ ಅವರದೂ ಇದೇ ಕತೆ. ಅವರ ನಿರ್ಮಾಣದ ಚೊಚ್ಚಲ ಚಿತ್ರವೂ ಕಾರಣಾಂತರಗಳಿಂದ ನಿಂತು ಹೋಗಿತ್ತು.

ರಾಜಕೀಯದಲ್ಲಿ ಬ್ಯುಸಿಯಾಗಿರುವ ಕಾರಣ ಜಗ್ಗೇಶ್ ಬಣ್ಣಬಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಬಿಡುವು ಮಾಡಿಕೊಂಡು ವೈಕುಂಠ ಎಕ್ಸ್ ಪ್ರೆಸ್ ಚಿತ್ರದ ಮೂಲಕ ಮತ್ತೆ ನಟನೆಗೆ ಮರಳುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada