»   »  ಟಿವಿ 9 ಸುದ್ದಿ ವಾಹಿನಿ ಜೊತೆ ಜಂಗ್ಲಿ ಸಣ್ಣ ಮೈತ್ರಿ

ಟಿವಿ 9 ಸುದ್ದಿ ವಾಹಿನಿ ಜೊತೆ ಜಂಗ್ಲಿ ಸಣ್ಣ ಮೈತ್ರಿ

Subscribe to Filmibeat Kannada
Junglee movie still
ಜಂಗ್ಲಿ ಚಿತ್ರತಂಡ ಪ್ರಚಾರದ ವೈಖರಿಯನ್ನೇ ಬದಲಿಸಿದೆ. ಅದು ಟಿವಿ-9 ವಾಹಿನಿ ಜೊತೆ ಸಣ್ಣ ಮೈತ್ರಿ ಮಾಡಿಕೊಂಡಿದೆ. ಹಾಡುಗಳು ಅದಾಗಲೇ ಹಿಟ್ ಆದದ್ದೇ ಸಾಕು ಎಂಬುದು ತಂಡದ ಭಾವನೆ. ಅದಕ್ಕೇ ಚಿತ್ರದ ಒಂದೇಒಂದು ಸುದ್ದಿಗೋಷ್ಠಿಯನ್ನೂ ರಾಕ್‌ಲೈನ್ ನಡೆಸಲಿಲ್ಲ. ಮುಹೂರ್ತ ಆದದ್ದು, ಕುಂಬಳಕಾಯಿ ಒಡೆದದ್ದು, ಕ್ಯಾಸೆಟ್ ಬಿಡುಗಡೆ ಕಂಡಿದ್ದು ಎಲ್ಲವೂ ಸುದ್ದಿಮಿತ್ರರ ಅನುಪಸ್ಥಿತಿಯಲ್ಲೇ.

ಕೊನೆಗೆ ಸಿನಿಮಾ ನೋಡಿ ಬನ್ನಿ ಅಂತ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಸುದ್ದಿಮಿತ್ರರನ್ನು ಕರೆಯಲೇ ಇಲ್ಲ. ಆದರೇನಂತೆ. ಸಿನಿಮಾ ಪತ್ರಕರ್ತರು ತಮ್ಮ ಹಣದಲ್ಲೇ ಸಿನಿಮಾ ನೋಡಿದರು. ವಿಮರ್ಶೆ ಇನ್ನಷ್ಟು ಪ್ರಾಮಾಣಿಕವಾಯಿತು. ಈ ರೀತಿಯ ಬೆಳವಣಿಗೆ ಪತ್ರಿಕೋದ್ಯಮದ ದೃಷ್ಟಿಯಿಂದ ಒಳ್ಳೆಯದೇ. ಆದರೆ, ಸಿನಿಮಾ ದೃಷ್ಟಿಯಿಂದ? ಅದನ್ನು ಸೂರಿ ಹಾಗೂ ರಾಕ್‌ಲೈನ್ ತರಹದವರು ಅರಿಯಬೇಕು.

ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada