For Quick Alerts
  ALLOW NOTIFICATIONS  
  For Daily Alerts

  ಶ್ರೀರಾಮುಲು ಬಿಎಸ್ಆರ್ ಪಕ್ಷಕ್ಕೆ ರಕ್ಷಿತಾ ಪ್ರೇಮ್

  |

  ಬಿ ಶ್ರೀರಾಮುಲು ನೇತೃತ್ವದ ಬಡವ, ಶ್ರೀಮಂತ, ಶ್ರಮಿಕರ ಪಕ್ಷ (ಬಿಎಸ್ಆರ್ ಪಕ್ಷ)ಕ್ಕೆ ಶ್ರೀಮತಿ ರಕ್ಷಿತಾ ಪ್ರೇಮ್ ಸೇರಿದ್ದಾರೆ. ಇಂದು, ಮಾರ್ಚ್ 9, 2012ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಶ್ರೀರಾಮುಲು ಆಫೀಸಿನಲ್ಲಿ ರಕ್ಷಿತಾ ಪ್ರೇಮ್, ಶ್ರೀರಾಮುಲು ಪಕ್ಷವನ್ನು ಅಧೀಕೃತವಾಗಿ ಸೇರಿದ್ದಾರೆ.

  ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಶ್ರೀರಾಮುಲು ಅವರ ಪ್ರಾದೇಶಿಕ ಪಕ್ಷವನ್ನು ಕನ್ನಡದ ಈ ಮಾಜಿ ತಾರೆ ರಕ್ಷಿತಾ ಸೇರಿರುವುದು ಹಲವರ ಹುಬ್ಬೇರಿಸಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಕ್ಷಿತಾ "ಸ್ವಲ್ಪ ದಿನಗಳ ಹಿಂದೆ ಶ್ರೀರಾಮುಲು ನಮ್ಮ ಮನೆಗೆ ಬಂದಿದ್ದರು. ಪ್ರೇಮ್ ನಮ್ಮಿಬ್ಬರಿಗೂ ಆಹ್ವಾನ ನೀಡಿದ್ದರು. ಆದರೆ ಅವರು ಒಪ್ಪದಿದ್ದಾಗ ನನ್ನನ್ನಾದರೂ ಸೇರಿಸಲು ಹೇಳಿದ್ದರು. ಅವರ ಆಮಂತ್ರಣವನ್ನು ಮನ್ನಿಸಿ ಸೇರಿಕೊಂಡಿದ್ದೇನೆ" ಎಂದಿದ್ದಾರೆ.

  ರಾಜಕೀಯದ ಅಂಗಳಕ್ಕೆ ಇದೀಗ ತಾರಾಮೆರಗು ಹೆಚ್ಚುತ್ತಿದೆ. ನಟಿ ರಮ್ಯಾ ಕಾಂಗ್ರೆಸ್ ಸೇರಿದ್ದಾಗಿದೆ. ಇತ್ತೀಚಿಗೆ ನಟಿ ಪೂಜಾ ಗಾಂಧಿ ಜೆಡಿಎಸ್ ಪಕ್ಷ ಸೇರಿಕೊಂಡಿದ್ದಾರೆ. ಮೊನ್ನೆ ಮೊನ್ನೆ ನಟಿ ಮಾಳವಿಕಾ ಕೂಡ ಜೆಡಿಎಸ್ ಸೇರಿದ್ದು ಹೊಸ ಬೆಳವಣಿಗೆ ಎನಿಸಿತ್ತು. ಇದೀಗ ರಕ್ಷಿತಾ ಪ್ರೇಮ್ ಬಿಎಸ್ ಅರ್ ಸೇರಿ ಹೊಸ ಸಂಚಲನ ಮೂಡಿದೆ.

  ಈಗಾಗಲೇ ನಟಿ ಉಮಾಶ್ರೀ ರಾಜಕೀಯ ವಲಯದಲ್ಲಿ ಹೆಸರು ಮಾಡಿದ್ದಾರೆ. ಬಿಜೆಪಿ ಪಾಳಯದಲ್ಲಿರುವ ನಟಿ ಶ್ರುತಿಗೆ ಜೆಡಿಎಸ್ ಪಕ್ಷಕ್ಕೆ ಸೇರುವಂತೆ ರಾಮನಗರದ ಸಭೆಯೊಂದರಲ್ಲಿ ಬಹಿರಂಗವಾಗಿವೇ ಎಚ್ ಡಿ ಕುಮಾರಸ್ವಾಮಿ ಆಮಂತ್ರಿಸಿದ್ದಾಗಿದೆ. ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆ ಇನ್ನೆಷ್ಟು ಜನ ಯಾವ ಯಾವ ಪಕ್ಷಕ್ಕೆ ಸೇರಲಿದ್ದಾರೋ! (ಒನ್ ಇಂಡಿಯಾ ಕನ್ನಡ)

  English summary
  Kannada Actress Rakhita Prem Joined Sriramulu's political party- BSR Congress Today, on March 9 2012, in Bangalore. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X