»   »  ಭಾರತೀಯ ಜನತಾ ಪಕ್ಷಕ್ಕೆ 'ತಾರಾ' ಬಲ?

ಭಾರತೀಯ ಜನತಾ ಪಕ್ಷಕ್ಕೆ 'ತಾರಾ' ಬಲ?

Posted By:
Subscribe to Filmibeat Kannada
Kannada actress Tara to join BJP?
ತಾರಾ ತಮ್ಮ ಹೆಸರನ್ನು ಅನುರಾಧಾ ಎಂದು ಬದಲಾಯಿಸಿಕೊಂಡಿದ್ದಾರೆ. ಹಾಗಂತ ಇದೇನು ಹೊಸ ನಾಮಕರಣವಲ್ಲ. ಅವರ ಮೂಲ ಹೆಸರು ಅನುರಾಧ ಎಂದೇ ಇತ್ತು. ಬೆಳ್ಳಿತೆರೆಗೆ ಬಂದ ನಂತರ ತಾರಾ ಆದರು! ಛಾಯಾಗ್ರಾಹಕ ವೇಣು ಬಾಳ ಸಂಗಾತಿಯಾದ ನಂತರ ತಾರಾ ವೇಣು ಎಂದಾಗಿದ್ದರು.

''ಹಳೆ ಹೆಸರು ಚೆನ್ನಾಗಿದೆ. ಆ ಹೆಸರನ್ನು ಮರೀಬೇಡ. ಅದರಿಂದ ನಿನ್ನ ತಾರಾಬಲ ಇನ್ನಷ್ಟು ದೃಢವಾಗುತ್ತದೆ'' ಎಂದು ಸಂಬಂಧಿಕರು ಸಲಹೆ ಮಾಡಿದ್ದರಂತೆ. ಹೆಸರು ಬದಲಾವಣೆಗೆ ಸಂಬಂಧಿಸಿದ ಪತ್ರಗಳಿಗೆ ತಾರಾ ಸಹಿ ಹಾಕಿ ಫೆಬ್ರವರಿ 6ನೇ ತಾರೀಖಿನಿಂದ ತಮ್ಮ ಹೆಸರನ್ನು ಅನುರಾಧ ಎಂದು ಬದಲಾಯಿಸಿಕೊಂಡಿದ್ದಾರೆ.

ಹೀಗೆ ಹೆಸರು ಬದಲಾಯಿಸಿಕೊಂಡ ತಕ್ಷಣ ಕಾಕತಾಳೀಯವೆಂಬಂತೆ ಭಾರತೀಯ ಜನತಾ ಪಕ್ಷದಿಂದ ತಾರಾ ಅವರಿಗೆ ಆಹ್ವಾನ ಬಂದಿದೆ. ಬೆಂಗಳೂರಿನಲ್ಲಿ ಡಿಗ್ನಿಟಿ ಪ್ರತಿಷ್ಠಾನ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಈ ವಿಷಯ ತಿಳಿಸಿದರು. ಆದರೆ ನೀವು ಬಿಜೆಪಿಗೆ ಸೇರುತ್ತೀರಾ? ಎಂಬ ಪ್ರಶ್ನೆಗೆ, ಆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಷ್ಟೇ ಹೇಳಿ ಪೂರ್ಣ ವಿರಾಮ ಇಟ್ಟರು!

(ದಟ್ಸ್ ಕನ್ನಡ ಚಿತ್ರವಾರ್ತೆ)
ನಟಿ ತಾರಾ ಸುರಿಸಿದ ಗಂಗಾ ಕಾವೇರಿ ಪ್ರವಾಹ
ಜೀ ಕನ್ನಡ ವಾರ್ತಾ ವಾಚಕಿಯಾಗಿ ನಟಿ ತಾರಾ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada