'ಬೆಳಗಾಂ'ಗೆ ಬಂದಿಳಿದ ಬೆಳದಿಂಗಳ ಬಾಲೆ ನಿಖಿತಾ
ಓಂ ಪ್ರಕಾಶ್ ರಾವ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಬೆಳಗಾಂ'. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುವುದರ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿರುವುದು ವಿಶೇಷ. ಡೆನಿಸಾ ಫಿಲಂಸ್ ಲಾಂಛನದಲ್ಲಿ ಚಿತ್ರ ಡಿಸೆಂಬರ್ 11ರಂದು ಸೆಟ್ಟೇರುತ್ತಿದೆ. ಅಂದಹಾಗೆ ಡೆನಿಸಾ, ಓಂ ಪತ್ನಿಯ ಹೆಸರಂತೆ.
ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಖಾರಹಬ್ಬ ಚಿತ್ರದ ಕಥಾವಸ್ತು. ಈ ಹಬ್ಬದ ಮಹತ್ವ ಎಂದರೆ, ಊರಿನವರು ಎಲ್ಲೇ ಇದ್ದರೂ ಖಾರಹಬ್ಬದ ದಿನ ತಾಯಿಯ ಕೈತುತ್ತು ತಿನ್ನಲೇ ಬೇಕು ಎಂದು ಬರುತ್ತಾರೆ. ಈ ಸೆಂಟಿಮೆಂಟಿನ ಆಧಾರವಾಗಿ ಓಂ ಕತೆಯನ್ನು ಹೆಣೆದಿದ್ದಾರೆ.
ಚಿತ್ರದ ನಾಯಕ ನಟ ಕಿಶೋರ್. ನಿಖಿತಾ ಹಾಗೂ ಶ್ವೇತಾ ನಾಯಕಿಯರು. ಚಿತ್ರದ ತಾರಾಗಣದಲ್ಲಿ ಶೋಭಾರಾಜ್, ಆಶಿಷ್ ವಿದ್ಯಾರ್ಥಿ, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಸುಚೇಂದ್ರ ಪ್ರಸಾದ್, ಅವಿನಾಶ್, ಹೇಮಾ ಚೌದರಿ, ಲೋಕನಾಥ್, ಶ್ರೀನಿವಾಸಮೂರ್ತಿ ಮುಂತಾದರು ಇದ್ದಾರೆ.
ಆಕ್ಷನ್, ಸೆಂಟಿಮೆಂಟ್ ಮತ್ತು ಹಾಸ್ಯ ಚಿತ್ರದ ಹೈಲೈಟು. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಉತ್ತರ ಕರ್ನಾಟಕದ ಸೊಗಡಿನ ಕತೆ ಇದು ಎಂದಾಯಿತು. ಚಿತ್ರದ ನಾಯಕ ಇಡೀ ಬೆಂಗಳೂರನ್ನೇ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬರುತ್ತಾನೆ. ಅವರ ಆಸೆ ಈಡೇರುತ್ತದೆಯೇ ಇಲ್ಲವೆ ಎನ್ನುವುದು ಚಿತ್ರದ ಒನ್ ಲೈನ್ ಕತೆ.


Click it and Unblock the Notifications











