For Quick Alerts
  ALLOW NOTIFICATIONS  
  For Daily Alerts

  ಅಭಿನವ ಚಕ್ರವರ್ತಿ ಬಿರುದು ಪಡೆಯಲಿರುವ ಸುದೀಪ್

  |

  ಕಿಚ್ಚ ಸುದೀಪ್ ಅವರಿಗೆ 'ಅಭಿನವ ಚಕ್ರವರ್ತಿ' ಎಂಬ ಹೊಸ ಬಿರುದು ದೊರೆಯಲಿದೆ. ಕರ್ನಾಟಕ ರಕ್ಷಣಾ ವೇದಿಕೆ ಸದಯದಲ್ಲಿಯೇ ಬೆಂಗಳೂರಿನಲ್ಲಿ ಬೃಹತ್ ಸಮಾರಂಭವೊಂದನ್ನು ಆಯೋಜಿಸಿ ಈ ಬಿರುದು ನೀಡಲಿದೆ. ನಿನ್ನೆ (ಜನವರಿ 8, 2012) ಕರ್ನಾಟಕ ರಕ್ಷಣಾ ವೇದಿಕೆ, ಬಾಪೂಜಿನಗರ ಘಟಕದ 'ಸಂಕ್ರಾಂತಿ ಸುಗ್ಗಿ' ಕಾರ್ಯಕ್ರಮದಲ್ಲಿ ಕರವೇ ವತಿಯಿಂದ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸುದೀಪ್ ಅವರನ್ನು ಸನ್ಮಾನಿಸಿದ ನಂತರ ಈ ವಿಷಯವನ್ನು ಬಹಿರಂಗಗೊಳಿಸಿದರು.

  ಸಮಾರಂಭದಲ್ಲಿ ಮಾತನಾಡಿದ ನಟ ಸುದೀಪ್, "ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರು ನನ್ನನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ. ಕನ್ನಡಿಗನಾಗಿ ಕನ್ನಡಕ್ಕಾಗಿ ದುಡಿಯುತ್ತಿದ್ದೇನೆ ಎನ್ನುವ ಆತ್ಮಾಭಿಮಾನ ನನ್ನಲ್ಲಿದೆ. ನಮ್ಮತನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ತೊಡಗಿಕೊಳ್ಳಬೇಕು. ಕರವೇಯೊಂದಿಗೆ ಕೈ ಜೋಡಿಸಿದರೆ ಇದು ಸಾಧ್ಯ" ಎಂದರು.

  ಬೇರೆ ಭಾಷೆಯಲ್ಲಿ ನಟಿಸುವ ಅವಕಾಶ ಬಂದಾಗ ಅದನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಹಾಗೇ, ನನ್ನ ನಟನೆ ಮೆಚ್ಚಿ ಕನ್ನಡಿದರು ನೀಡಿ ಉನ್ನತ ಸ್ಥಾನವನ್ನು ಮರೆತಿಲ್ಲ. ಜೀವನದ ಕೊನೆಯವೆರೆಗೂ ಕನ್ನಡ ಚಿತ್ರರಣಗದಲ್ಲಿಯೇ ಉಳಿಯುವುದಾಗಿ ಸುದೀಪ್ ಘೋಷಿಸಿದರು. ಒಟ್ಟಿನಲ್ಲಿ ಕಿಚ್ಚ ಸುದೀಪ್ ಇನ್ನು ಮುಂದೆ 'ಅಭಿನವ ಚಕ್ರವರ್ತಿ' ಎನಿಸಿಕೊಳ್ಳಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Karnataka Rakshana Vedike offers Abhinava Chakravarthi Title to actor Kichcha Sudeep very shortly. They announced it yesterday in Karave function, Bapujinagar Branch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X