»   » ಕೃಷ್ಣನಿಗೆ ನ್ಯಾಯ ಒದಗಿಸಲು ಪ್ರೇಕ್ಷಕರ ಒಕ್ಕೊರಲ ಆಗ್ರಹ

ಕೃಷ್ಣನಿಗೆ ನ್ಯಾಯ ಒದಗಿಸಲು ಪ್ರೇಕ್ಷಕರ ಒಕ್ಕೊರಲ ಆಗ್ರಹ

Posted By:
Subscribe to Filmibeat Kannada

ಚಿತ್ರ ನಿರ್ದೇಶಕ ಶಶಾಂಕ್ ಪಾಲಿಗೆ ಸ್ವರ್ಗ ಮೂರೇ ಗೇಣು ಅಂತರದಲ್ಲಿದೆ. ಕೃಷ್ಣನ್ ಲವ್ ಸ್ಟೋರಿ ಅವರನ್ನು ಆ ಪರಿ ಆನಂದಗೊಳಿಸಿದೆಯಂತೆ. ಇದೀಗ ಕೃಷ್ಣನ್ ಲವ್ ಸ್ಟೋರಿ ಭಾಗ 2 ತೆಗೆಯಲು ಸಿದ್ಧತೆ ನಡೆಸಿದ್ದಾರೆ ಶಶಾಂಕ್. 'ಕೃಷ್ಣ' ಸೂಪರ್ ಹಿಟ್ ಆದ ಹುರುಪು ಮತ್ತಷ್ಟು ಹುಮ್ಮಸ್ಸಿಗೆ ಕಾರಣವಾಗಿದೆ.

ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡ ಕಾರಣ ಪ್ರೇಕ್ಷಕ ಧಣಿಗಳು ಕೃಷ್ಣನ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತಕಂಠದಿಂದ ವ್ಯಕ್ತಪಡಿಸಿದ್ದಾರೆ. "ಕೃಷ್ಣನಿಗೆ ಚಿತ್ರದಲ್ಲಿ ನ್ಯಾಯ ಒದಗಿಸಿಲ್ಲ. ಪ್ರೀತಿಸಿದ ಹುಡುಗಿ ಅವನಿಗೆ ಕಡೆಗೂ ಸಿಗಲಿಲ್ಲ. ಇದು ಅನ್ಯಾಯ. ಈ ಅನ್ಯಾಯವನ್ನು ಸರಿಪಡಿಸಿ" ಎಂದು ಕೃಷ್ಣನ ಪರವಾಗಿ ಧ್ವನಿ ಎತ್ತಿದ್ದಾರೆ.

ಶಶಾಂಕ್ ವಿಧಿಯಿಲ್ಲದೆ ಭಾಗ 2ರಲ್ಲಿ ಕೃಷ್ಣನಿಗೆ ನ್ಯಾಯ ಒದಗಿಸಲು ತೀರ್ಮಾನಿಸಿದ್ದಾರೆ. ಕೃಷ್ಣನ್ ಲವ್ ಸ್ಟೋರಿ ಭಾಗ 2ರಲ್ಲೂ ಅಜಯ್ ಅವರೇ ನಾಯಕರು. ತಮ್ಮ ಹಿಂದಿನ ಚಿತ್ರದ ಬಹುತೇಕ ತಾರಾಗಣ ಈ ಚಿತ್ರದಲ್ಲೂ ಇರುತ್ತದೆ. ಮೊದಲು ಚಿತ್ರಕತೆ ಸಿದ್ಧವಾಗಲಿ ಬಳಿಕ ಎಲ್ಲ ವಿವರಗಳನ್ನು ತಿಳಿಸುತ್ತೇನೆ ಎಂದು ಹೇಳಿ ಶಶಾಂಕ್ ಚಿತ್ರಕತೆ ಹೆಣೆಯಲು ಕೂತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada