For Quick Alerts
  ALLOW NOTIFICATIONS  
  For Daily Alerts

  ಇದೊಂಥರಾ ಲವ್ ಸ್ಟೋರಿ ಅಂತಿದ್ದಾರೆ ಲವ್ಲಿ ಸ್ಟಾರ್

  By Rajendra
  |

  ಲವ್ಲಿ ಸ್ಟಾರ್ ಪ್ರೇಮ್ ಅವರನ್ನು ಅವರ ಹೊಸ ಚಿತ್ರದ ಬಗ್ಗೆ ಇದು ಯಾವ ತರಹ ಲವ್ ಸ್ಟೋರಿ ಎಂದು ಕೇಳಿದರೆ 'ಇದೊಂಥರಾ ಲವ್ ಸ್ಟೋರಿ' ಬಿಡಿ ಎಂಬ ಉತ್ತರ ಬರುತ್ತದೆ. ಅವರ ಅಭಿನಯದ ಹೊಸ ಚಿತ್ರದ ಶೀರ್ಷಿಕೆಯೇ ಹಾಗಿದೆ. ಚಿತ್ರದಕ್ಕೆ ಅಡಿಬರಹದ ಬದಲಾಗಿ 'ಐ ಲವ್ ಯು' ಎಂಬ ಮೇಲ್ಬರಹವನ್ನು ಕೊಡಲಾಗಿದೆ.

  ಪ್ರೆಮ್ ಮತ್ತು ರಮ್ಯಾ ಅಭಿನಯದ ಪಕ್ಕಾ ಪ್ರೇಮ ಕತೆ 'ಜೊತೆಗಾರ' ಈ ವಾರ ತೆರೆಕಾಣುತ್ತಿದೆ. ಇದೇ ಖುಷಿಯಲ್ಲಿ ಪ್ರೇಮ್ 'ಇದೊಂಥರಾ ಲವ್ ಸ್ಟೋರಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ನಾಗೇಂದ್ರ ಅರಸ್. ಶೋಭಾ ರಾಜಣ್ಣ ನಿರ್ಮಿಸುತ್ತಿರುವ ಚಿತ್ರ.

  ಈ ರಾಜೀವ್ ಗಾಂಧಿ ಅಲ್ಲ, ಡೆಡ್ಲಿ ಸೋಮ, ಬಾಬಾ ಎಂಬ ಚಿತ್ರಗಳನ್ನು ನಿರ್ಮಿಸಿರುವ ಶೋಭಾ ರಾಜಣ್ಣ ಅವರ ನಾಲ್ಕನೆ ಕಾಣಿಗೆ ಇದು. 'ಇದೊಂಥರಾ ಲವ್ ಸ್ಟೋರಿ' ಕತೆ ಏನೆಂದರೆ, ಇದೊಂಥರಾ ಹಾಸ್ಯ ಮಿಶ್ರಿತ ಪಕ್ಕಾ ಲವ್ ಸ್ಟೋರಿಯಂತೆ. ನಾಯಕಿಗಾಗಿ ಹುಡುಕಾಟ ನಡೆದಿದೆ. ಮಲ್ಲು ಬೆಡಗಿಯೊಬ್ಬರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ.

  ಡೈನಮಿಕ್ ಸ್ಟಾರ್ ದೇವರಾಜ್, ರಂಗಾಯಣ ರಘು, ತುಳಸಿ, ಶಿವಮಣಿ, ಪದ್ಮಜಾರಾವ್ ಪಾತ್ರವರ್ಗದ ಉಳಿದ ಮುಖಗಳು. ವಿಜಯ್ ಚಂದ್ರ ಅವರ ಕಥೆ, ಅನಿಲ್ ಅವರ ಸಂಭಾಷಣೆ, ಸುಧಾಕರ್ ಅವರ ಛಾಯಾಗ್ರಹಣವಿದೆ. ಸಂಗೀತ ನಿರ್ದೇಶಕರ ಆಯ್ಕೆ ನಡೆಯಬೇಕಿದೆ. ಸೆಪ್ಟೆಂಬರ್ 27ರಂದು ಸೆಟ್ಟೇರಲಿರುವ ಈ ಚಿತ್ರವನ್ನು ಬೆಂಗಳೂರು ಹಾಗೂ ಸಕಲೇಶಪುರ ಸುತ್ತಮುತ್ತ ಚಿತ್ರೀಕರಿಸಲಾಗುತ್ತದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X