»   » ನಾರಿಯ ಸೀರೆ ಕದಿಯಲು ರವಿ ರೆಡಿಯಾದ್ರು

ನಾರಿಯ ಸೀರೆ ಕದಿಯಲು ರವಿ ರೆಡಿಯಾದ್ರು

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹೊಚ್ಚ ಹೊಸ ಚಿತ್ರ 'ನಾರಿಯ ಸೀರೆ ಕದ್ದ' ಚಿತ್ರಕ್ಕೆ ಶುಕ್ರವಾರ (ಜುಲೈ.9)ರಂದು ಮುಹೂರ್ತ ನಡೆಯಲಿದೆ. "ಕಾಮಿಡಿ" ಹಾಗೂ ಮನರಂಜನೆಗೆ ಒತ್ತುಕೊಟ್ಟು ಈ ಚಿತ್ರದ ಕಥೆ ರಚಿಸಲಾಗಿದ್ದು, ಬೆಂಗಳೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.

ಸಂಗೀತಂ ಶ್ರೀನಿವಾಸರಾವ್, ಎಂ.ಎಸ್. ರಾಜಶೇಖರ್ ರಂಥ ಹಿರಿಯ ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ಹೆಚ್ಚಾಗಿ ಡಾ.ರಾಜ್‌ಕುಮಾರ್ ಬ್ಯಾನರ್‌ನ ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಪಡೆದ ಅಣ್ಣಯ್ಯ ಅವರ ನಿರ್ದೇಶನ 'ನಾರಿಯ ಸೀರೆ ಕದ್ದ' ಚಿತ್ರಕ್ಕಿದೆ. ಹೂ ಚಿತ್ರದ ನಂತರ ರವಿಚಂದ್ರನ್ 'ಆಸೆ' ಹಾಗೂ 'ಮಂಜಿನಹನಿ' ಚಿತ್ರಗಳಲ್ಲಿ ನಿರತರಾಗಿರುವಾಗಲೇ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ.

ಚಿತ್ರದ ಹಾಡುಗಳನ್ನು ಕರ್ನಾಟಕದಲ್ಲೇ ಇರುವಂಥ ಮನಮೋಹಕ ತಾಣಗಳಲ್ಲಿ ಚಿತ್ರೀಕರಿಸುವ ಪ್ಲಾನ್ ಚಿತ್ರತಂಡದ್ದು. ಗೌತಮಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಡಿ.ಬಿ. ಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಣ್ಣಯ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ನಟ, ನಿರ್ದೇಶಕ ಮೋಹನ್ ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ.

ವಿ. ಮನೋಹರ್‌ರವರ ಸಂಗೀತ ಸಂಯೋಜನೆ, ವಿಷ್ಣುವರ್ಧನ್‌ರ ಛಾಯಾಗ್ರಹಣ ಹಾಗೂ ಸಂಜೀವರೆಡ್ಡಿ ಅವರ ಸಂಕಲನ ಇದ್ದು, ರವಿಚಂದ್ರನ್, ನಿಖಿತಾ, ನವೀನ್ ಕೃಷ್ಣ, ಶುಭಾ ಪುಂಜಾ, ಹಾಗೂ ದತ್ತಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada