»   » ಚಿತ್ರರಂಗಕ್ಕೆ ನಮಿತಾ ರಜಾ ಘೋಷಣೆ

ಚಿತ್ರರಂಗಕ್ಕೆ ನಮಿತಾ ರಜಾ ಘೋಷಣೆ

Posted By:
Subscribe to Filmibeat Kannada

ದಕ್ಷಿಣದ ಸೆಕ್ಸ್ ಬಾಂಬ್ ನಮಿತಾ ಚಿತ್ರರಂಗಕ್ಕೆ ಅಡಿಯಿಟ್ಟಾಗ ಮೂವತ್ತೆರಡು ಇಪ್ಪತ್ತೆಂಟು ಮೂವತ್ತಾಲ್ಕು ಇದ್ದದ್ದು ಚಿತ್ರರಂಗದ ಹಾಲುತುಪ್ಪ ಮೈಸೇರಿದನಂತರ ನಲವತ್ತು ಮೂವತ್ತೆಂಟು ನಲವತ್ನಾಲ್ಕಾಗಿದೆ. ಇದು ಇನ್ನೂ ಹೆಚ್ಚಾದರೆ ಅಪಾಯವೆಂದರಿತ ನಮಿತಾಳ ಪರ್ಸನಲ್ ಅಡ್ವೈಸರ್, ದೇಹದ ಸುತ್ತಳತೆಯನ್ನು ಕುಗ್ಗಿಸಿಕೊಳ್ಳಲು ಸಲಹೆ ನೀಡಿದ್ದಾರೆ.

ಹಾಗಾಗಿ ಚಿತ್ರರಂಗದಿಂದ ಕೊಂಚ ಕಾಲ ದೂರ ಸರಿಯಲು ಸೆಕ್ಸಿ ತಾರೆ ನಮಿತಾ ನಿರ್ಧರಿಸಿದ್ದಾರೆ. ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಶೀಘ್ರದಲ್ಲೆ ಮುಗಿಸುವ ಧಾವಂತದಲ್ಲಿ ನಮಿತಾ ಇದ್ದಾರೆ. ಸದ್ಯಕ್ಕೆ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಮಿತಾ ನಟಿಸುತ್ತಿದ್ದು ತಮಿಳಿನ ಒಂದು ಚಿತ್ರವೂ ಕೈಯಲ್ಲಿದೆ. ಇವೆಲ್ಲಾ ಮುಗಿಸಿಕೊಂಡು ಕೆಲದಿನಗಳ ಮಟ್ಟಿಗೆ ಚಿತ್ರರಂಗಕ್ಕೆ ಟಾಟಾ, ಬಾಯ್ ಬಾಯ್ ಹೇಳಲಿದ್ದಾರೆ.

ಯೌವನದ ಹೊಳೆಯಲ್ಲಿ ಸಾಕಷ್ಟು ಈಜಾಡಿದ ಈ ನಟಿಗೆ ಬಾಹ್ಯ ಸೌಂದರ್ಯದ ಬಗ್ಗೆ ಈಗ ಅತೀವ ಕಾಳಜಿ ಉಂಟಾಗಿದೆ. ನಮಿತಾಳ ಬಂಡವಾಳ ಆಕೆಯ ಮುದ್ದು ಮುಖವಲ್ಲ ದಢೂತಿ ದೇಹ ಎಂಬ ರಹಸ್ಯ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ತಿಳಿದಿದೆ. ಅದನ್ನೇ ಬಂಡವಾಳ ಮಾಡಿಕೊಂಡು ನಮಿತಾಳನ್ನು ಸಾಕಷ್ಟು ಸಿನೆಮಾಗಳಲ್ಲಿ ತೊಪ್ಪೆಯಾಗಿಸಿದ್ದಾರೆ.

ಆದರೆ ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ನಮಿತಾ ತಮ್ಮ ದುಂಡಗಿನ ದೇಹವನ್ನು ಕರಗಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನೀಲಕಂಠ ಚಿತ್ರದಲ್ಲಿ ಕೂಡ ರವಿಚಂದ್ರನ್ ಅಮಿತವಾಗಿ ನಮಿತಾಳ ಮೇಲೆ ಹಾವಿನಂತೆ ಹರಿದಾಡಿದ್ದನ್ನು ಕನ್ನಡಿಗರು ಮರೆತಿಲ್ಲ. ಈ ಹಿಂದೆ ಎದೆಭಾರ ಕುಗ್ಗಿಸಲು ನಮಿತಾ ಮಲೇಷಿಯಾ ಯಾತ್ರೆ ಮಾಡಿದ್ದರು. ಈಗ ದೇಹ ಭಾರ ಕುಗ್ಗಿಸಿಕೊಳ್ಳಲು ಹೊರಟಿದ್ದಾರೆ. ಬಳುಕುವ ಬಳ್ಳಿಯಂತಾಗಿ ಬರುತ್ತಾರೋ ಕಾದು ನೋಡಬೇಕು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada