»   » ಲಂಗ ದಾವಣಿಗೆ ಮನಸೋತ ನಮಿತಾ

ಲಂಗ ದಾವಣಿಗೆ ಮನಸೋತ ನಮಿತಾ

Subscribe to Filmibeat Kannada

ಬಹುತೇಕ ನಟಿಮಣಿಯರು ಸೀರೆಗೆ ಮಾರುಹೋಗುತ್ತಿದ್ದರೆ ದಕ್ಷಿಣದ ಖ್ಯಾತ ತಾರೆ ನಮಿತಾ ಮಾತ್ರ ಲಂಗ ದಾವಣಿಗೆ ಮೊರೆಹೋಗಿದ್ದಾರೆ. ಚೆನ್ನೈನಲ್ಲಿ ನಡೆದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಮಿನಿ ಸ್ಕರ್ಟ್ ನಲ್ಲಿ ಆಗಮಿಸಿ ಎಲ್ಲರ ಗಮನವನ್ನೂ ನಮಿತಾ ತನ್ನತ್ತ ಸೆಳೆಕೊಂಡಿದ್ದರು.

ಈ ಸಂದರ್ಭದಲ್ಲಿ ಗೀತ ಸಾಹಿತಿಯೊಬ್ಬರು ನಮಿತಾಗೆ ಕಿವಿಮಾತೊಂದನ್ನು ಹೇಳಿದರು. ತಾವು ಸಾಂಪ್ರದಾಯಿಕ ಲಂಗ ದಾವಣಿ ಉಟ್ಟರೆ ಚೆನ್ನಾಗಿರುತ್ತೆ ಎಂದು ಸಲಹೆ ನೀಡಿದರು. ಈ ಸಲಹೆಯನ್ನು ನಮಿತಾ ಸಹ ಒಪ್ಪಿಗೆ ಸೂಚಿಸಿದ್ದಾರೆ. ನಮಿತಾ ಲಂಗ ದಾವಣಿಯಲ್ಲಿ ಕಾಣಿಸಿಕೊಂಡರೆ ಎಲ್ಲರೂ ಇದೇ ಸಾಂಪ್ರದಾಯಿಕ ಉಡುಗೆಯನ್ನು ಪಾಲಿಸುತ್ತಾರೆ ಎಂಬುದು ಅವರ ಸಲಹೆಯ ಹಿಂದಿನ ಮರ್ಮವಾಗಿತ್ತು.

''ಲಂಗ ದಾವಣಿ ಉಡಲು ನನ್ನದೇನು ಅಭ್ಯಂತರವಿಲ್ಲ. ಮುಂಬರುವ ಚಿತ್ರಗಳಲ್ಲಿ ಲಂಗ ದಾವಣಿಯಲ್ಲಿ ಕಾಣಿಸುವುದಾಗಿ ನಮಿತಾ ಭರವಸೆ ಕೊಟ್ಟಿದ್ದಾರೆ. ತಮ್ಮ ಹಿಂದಿನ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮಕ್ಕೆ ನಮಿತಾ ಗೈರು ಹಾಜರಾಗಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗೆ ನಮಿತಾ ಹೇಳದೆ ಕೇಳದೆ ಕೈಕೊಡುತ್ತಿರುವ ಬಗ್ಗೆ ಕ್ಯಾತೆ ತೆಗೆದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನಮಿತಾ, ''ನಮಗೂ ವೈಯಕ್ತಿಕ ಸಮಸ್ಯೆಗಳಿರುತ್ತವೆ. ಅನಾರೋಗ್ಯದ ಕಾರಣದಿಂದ ಕೆಲವೊಂದು ಕಾರ್ಯಕ್ರಮಳಿಗೆ ಬರಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ತುರ್ತು ಕೆಲಸಗಳಿದ್ದ ಕಾರಣ ಬರಲು ಸಾಧ್ಯವಾಗಲಿಲ್ಲ. ಇದನ್ನು ಪ್ರೇಕ್ಷಕರೂ ಅರ್ಥ ಮಾಡಿಕೊಳ್ಳಬೇಕು'' ಎಂದು ನಮಿತಾ ಉತ್ತರಿಸಿದ್ದಾರೆ.

(ದಟ್ಸ್ ಕನ್ನಡ ಸಿನಿಮಾ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada