»   »  ತೆರೆಮರೆಯಾದ ನೀನ್ಯಾರೆಗೆ ಪುನರ್ಜನ್ಮ ಪ್ರಾಪ್ತಿ!

ತೆರೆಮರೆಯಾದ ನೀನ್ಯಾರೆಗೆ ಪುನರ್ಜನ್ಮ ಪ್ರಾಪ್ತಿ!

Subscribe to Filmibeat Kannada
Producer Varada Reddy
ನೀನ್ಯಾರೆ ಚಿತ್ರವನ್ನು ಈಗ ಪುನಃ ಬಿಡುಗಡೆ ಮಾಡಲು ನಿರ್ಮಾಪಕ ವರದರೆಡ್ಡಿ ನಿರ್ಧರಿಸಿದ್ದಾರೆ. ಈ ಕಾರ್ಯಕ್ಕೆ ನಿರ್ದೇಶಕ ಶಿಂಧೇಶೆ ಸಹ ವರದ ರೆಡ್ಡಿಯೊಂದಿಗೆ ಕೈ ಜೋಡಿಸುತ್ತಿದ್ದಾರೆ. ಅತಿ ಶೀಘ್ರದಲ್ಲೇ ನೀನ್ಯಾರೆ ಮರು ಪ್ರದರ್ಶನ ಕಾಣಲಿದೆ ಎಂದು ವರದರೆಡ್ಡಿ ತಿಳಿಸಿದ್ದಾರೆ.

ವಿ.ಮನೋಹರ್ ಸಂಗೀತ ನಿರ್ದೇಶಿಸಿದ 100ನೆಯ ಹಾಗೂ ಹೊಸಬರ 'ನೀನ್ಯಾರೆ'ಚಿತ್ರ ಒಂದೇ ವಾರಕ್ಕೆ ಬೆಂಗಳೂರಿನ ಸಾಗರ್ ಚಿತ್ರಮಂದಿರದಿಂದ ಎತ್ತಂಗಡಿಯಾಗಿತ್ತು.ಈ ಬೆಳವಣಿಗೆಯಿಂದ ಚಿತ್ರದ ನಿರ್ಮಾಪಕ ವರದರೆಡ್ಡಿ ಕನ್ನಡ ಚಿತ್ರೋದ್ಯಮದ ಬಗ್ಗೆ ಕೆಂಡಾಮಂಡಲವಾಗಿದ್ದರು. ಕನ್ನಡ ಚಿತ್ರೋದ್ಯಮದಲ್ಲಿ ಹೊಸಬರನ್ನು ಕಾಲಕಸವಾಗಿ ಕಾಣಲಾಗುತ್ತಿದೆ. ಅವರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವರದರಾಜ್ ಬೊಬ್ಬೆ ಹೊಡೆದಿದ್ದರು.

ನೀನ್ಯಾರೆ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪ್ರೇಕ್ಷಕರನ್ನು ಸೆಳೆಯುವ ಮೊದಲೇ ಚಿತ್ರ ಮಂದಿರದಿಂದ ನಾಪತ್ತೆಯಾಗಿತ್ತು. ಪ್ರೀತಂ ಗುಬ್ಬಿ ನಿರ್ದೇಶನದ 'ಹಾಗೆ ಸುಮ್ಮನೆ' ಚಿತ್ರಡಿ.26ರಂದು ಬಿಡುಗಡೆಯಾಗಿ ಸಾಗರ್ ಚಿತ್ರಮಂದಿರದಿಂದ ನೀನ್ಯಾರೆ ಚಿತ್ರವನ್ನು ಎತ್ತಂಗಡಿ ಮಾಡಲಾಗಿತ್ತು. ಹೊಸಬರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವರದರೆಡ್ಡಿ ಖೇದ ವ್ಯಕ್ತಪಡಿಸಿದ್ದರು. ಪುನರ್ಜನ್ಮ ಪಡೆಯುತ್ತಿರುವ ನೀನ್ಯಾರೆ ಮತ್ತೆ ಪ್ರೇಕ್ಷಕರನ್ನು ಸೆಳೆಯುತ್ತಾ? ಕಾದು ನೋಡಬೇಕಾಗಿದೆ?

(ದಟ್ಸ್ ಕನ್ನಡ ಚಿತ್ರವಾರ್ತೆ)
ನೀನ್ಯಾರೆ?, ಛಾಯಾಗ್ರಾಹಕ ವಿಷ್ಣುಗೆ ಹ್ಯಾಟ್ಸಾಫ್!
ನೀನ್ಯಾರೆ ಎತ್ತಂಗಡಿಯಿಂದ ನಿರ್ಮಾಪಕ ಗರಂ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada