»   » 'ನಿರ್ದೋಷಿ'ಯಾಗಿ ಹೊರಬಿದ್ದ 'ರಸಗುಲ್ಲ'

'ನಿರ್ದೋಷಿ'ಯಾಗಿ ಹೊರಬಿದ್ದ 'ರಸಗುಲ್ಲ'

Subscribe to Filmibeat Kannada

ಗೋವರ್ಧನ್ ನಿರ್ದೇಶನದ 'ರಸಗುಲ್ಲ' ಚಿತ್ರ "ನಿರ್ದೋಷಿ" ಎಂದು ಹೆಸರು ಬದಲಾವಣೆ ಮಾಡಿಕೊಂಡು ಅರ್ಧವರ್ಷದ ಹಿಂದೆ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಅರ್ಹತಾಪತ್ರವನ್ನು ನೀಡಿತು. ಈ ಅರ್ಹತಾಪತ್ರದೊಂದಿಗೆ ಚಿತ್ರವನ್ನು ತೆರೆಗೆ ತರಲು ಒಲ್ಲದ ನಿರ್ಮಾಪಕರು ಸೆನ್ಸಾರ್ ಮಂಡಳಿ ನ್ಯಾಯಾಧಿಕರಣಕ್ಕೆ ಮೊರೆ ಹೋದರು.

ಕಡೆಯದಾಗಿ ಚಿತ್ರವನ್ನು ವೀಕ್ಷಿಸಿದ ಉಷಾಮೆಹರ್ ನೇತೃತ್ವದ ನವದೆಹಲಿಯ ಟ್ರಿಬ್ಯುನಲ್ ಚಿತ್ರಕ್ಕೆ ಯು\ಎ ಅರ್ಹತಾಪತ್ರ ನೀಡಿದೆ. ಅಲ್ಲದೆ ಚಿತ್ರದಲ್ಲಿ ಯಾವುದೇ ದ್ವಂದ್ವರ್ಥದ ಸಂಭಾಷಣೆಗಳಾಗಲಿ ಅಥವಾ ಸನ್ನಿವೇಶಗಳಾಗಲಿ ಇಲ್ಲ ಎಂದು ಮಂಡಳಿ ಅಭಿಪ್ರಾಯ ಪಟ್ಟಿದೆ ಎಂದು ನಿರ್ಮಾಪಕಿ ಕುಮಾರಿ ಸಂಜನಾ ತಿಳಿಸಿದ್ದಾರೆ.

ಸದ್ಯದಲೇ ತೆರೆಗೆ ಬರುವ ಈ ಚಿತ್ರದಲ್ಲಿ ಖ್ಯಾತನಟ ಕುಲಭೂಷಣ್ ಖರ್ ಬಂದಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದು, ಸಂಗೀತವನ್ನೂ ಸಂಯೋಜಿಸಿದ್ದಾರೆ. ರುದ್ರಮೂರ್ತಿ ಶಾಸ್ತ್ರಿ ಅವರ ಗೀತರಚನೆ ಹಾಗೂ ಸಂಭಾಷಣೆ, ದಿವಾಕರ್ ರಾವ್ ಛಾಯಾಗ್ರಹಣ, ಪಿ.ಆರ್.ಸೌಂದರರಾಜ್ ಸಂಕಲನ, ಲೀಲಾಮನೋಹರ್ ನಿರ್ಮಾಣ ನಿರ್ವಹಣೆಯಿದೆ. ಚಿತ್ರದ ತಾರಾಬಳಗದಲ್ಲಿ ಪಿಯೂಷ್, ಆನಂದ್, ಕಶೀಷ್‌ರೀಚಾ, ಆರ್ಯ, ಮನೋಜ್, ಕುಲಭೂಷಣ್ ಖರ್ ಬಂದಾ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada