»   »  ಪ್ರೇಮ್ ರ ಜನುಮ ಜನುಮದಲ್ಲೂ ತೆರೆಗೆ ಸಿದ್ಧ

ಪ್ರೇಮ್ ರ ಜನುಮ ಜನುಮದಲ್ಲೂ ತೆರೆಗೆ ಸಿದ್ಧ

Subscribe to Filmibeat Kannada
Prem's Januma-Janumadallu is ready
'ಹೊಂಗನಸು' ಚಿತ್ರದ ನಂತರ ನಟ ಪ್ರೇಮ್ ಒಂದು ವರ್ಷ ಸುದೀರ್ಘ ವಿರಾಮ ತೆಗೆದುಕೊಂಡು ಈಗ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದುಬಂದಿದ್ದಾರೆ. ಅವರು ನಟಿಸಿದ ನೆನಪಿರಲಿ, ಜೊತೆ ಜೊತೆಯಲಿ ಮತ್ತು ಪಲ್ಲಕ್ಕಿ ಚಿತ್ರಗಳು ಯಶಸ್ವಿಯಾಗಿದ್ದವು. ಆದರೆ ಗುಣವಂತ, ಹೊಂಗನಸು ಚಿತ್ರಗಳು ಸೋಲುಂಡಿದ್ದವು.

ಈ ಸೋಲಿನ ಬಳಿಕವೂ ಪ್ರೇಮ್ ರನ್ನು ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬಂದವು. ಆದರೆ ಪ್ರೇಮ್ ಅಳೆದು ತೂಗಿ ಚಿತ್ರಕಥೆಗಳನ್ನು ಆಯ್ಕೆ ಮಾಡಿಕೊಂಡರು. ಹಾಗಾಗಿ ಒಂದು ವರ್ಷ ಸುದೀರ್ಘ ವಿರಾಮ, ಅದರ ಫಲವೇ 'ಜನುಮ ಜನುಮದಲ್ಲೂ'.

ಏಪ್ರಿಲ್ ತಿಂಗಳಲ್ಲಿ ಪ್ರೇಮ್ ರ 'ಜನುಮ ಜನುಮದಲ್ಲೂ' ತೆರೆಗೆ ಬರಲು ಸಿದ್ಧವಾಗಿದೆ. ರಮೇಶ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅಂದ್ರಿತಾ ರೇ ನಾಯಕಿಯಾಗಿ ಅಭಿನಯಿಸಿದ್ದಾರೆ. ರಮೇಶ್ ಯಾದವ್ ನಿರ್ಮಿಸುತ್ತಿರುವ ಕೆಂಚ, ಬಾಸ್ ಚಿತ್ರಗಳು ವಿವಿಧ ಹಂತಗಳ ಚಿತ್ರೀಕರಣದಲ್ಲಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

'ಗೌತಮ್' ಆಗಿ ಬರಲಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada