For Quick Alerts
  ALLOW NOTIFICATIONS  
  For Daily Alerts

  ರೋಗಿಗಳಲ್ಲಿ ಹೊಸ ಚೈತನ್ಯ ತುಂಬಿದ ರಜನಿಕಾಂತ್

  By Rajendra
  |

  ಅನಾರೋಗ್ಯದಿಂದ ಬಳಲುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಈಗಷ್ಟೆ ಸೇಂಟ್ ಇಸಬೆಲ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಬಳಿಕ ಅವರು ಆಸ್ಪತ್ರೆಯಲ್ಲಿದ್ದ ಇತರೆ ರೋಗಿಗಳ ಕ್ಷೇಮ ಸಮಾಚಾರವನ್ನು ವಿಚಾರಿಸಿದ್ದಾಗಿ ವೈದ್ಯರು ತಿಳಿಸಿದ್ದಾರೆ. ರಜನಿಯನ್ನು ಕಂಡ ರೋಗಿಗಳ ಮುಖದಲ್ಲೂ ಹೊಸ ಚೈತನ್ಯ ಕಂಡುಬಂದಿದೆಯಂತೆ.

  ಆಸ್ಪತ್ರೆಯಲ್ಲಿ ತೀರಾ ಬಳಲುತ್ತಿದ್ದ ರೋಗಿಗಳು ರಜನಿಯನ್ನು ಮಾತುಗಳನ್ನು ಕೇಳಿ ಹೊಸ ಹುರುಪು, ಹುಮ್ಮಸ್ಸಿನಿಂದ ಕುಣಿದಾಡಿದರಂತೆ. "ರಜನಿ ಆರೋಗ್ಯ ಸದೃಢವಾಗಿದೆ. ಬೇರೆಯವರ ಆರೋಗ್ಯದ ಬಗ್ಗೆ ಅವರು ವಹಿಸಿದ ಕಾಳಜಿ ನಿಜಕ್ಕೂ ಅಭಿನಂದನಾರ್ಹ" ಎಂದಿದ್ದಾರೆ ಆಸ್ಪತ್ರೆ ವೈದ್ಯರು. ರಜನಿ ಕಳೆದ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದರು.

  ಏಪ್ರಿಲ್ 29ರಂದು ಅವರ ಹೊಸ ಚಿತ್ರ 'ರಣ' ಆರಂಭವಾದ ದಿನವೇ ರಜನಿ ಆರೋಗ್ಯ ಕೈಕೊಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇನ್ನೇನು ಚಿತ್ರೀಕರಣ ಆರಂಭಿಸಬೇಕು ಅನ್ನುವಷ್ಟರಲ್ಲಿ ಮತ್ತೆ ಅನಾರೋಗ್ಯಕ್ಕೆ ತುತ್ತಾದರು. ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಆಸ್ಪತ್ರೆಯಿಂದ ಶೀಘ್ರದಲ್ಲೆ ಬಿಡುಗಡೆಯಾಗಲಿದ್ದಾರೆ ಎನ್ನುತ್ತವೆ ಮೂಲಗಳು.

  English summary
  Super Star Rajinikanth is not bedridden even in the hospital where he’s admitted and being treated for bronchitis and fever. So instead of just dozing all the time, Rajini has been meeting other patients and inquiring about their health.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X