»   »  ದಳವಾಯಿ ಪಾತ್ರ ರಜನಿಗೆ ಒಪ್ಪುವುದಿಲ್ಲ: ಭರಣ

ದಳವಾಯಿ ಪಾತ್ರ ರಜನಿಗೆ ಒಪ್ಪುವುದಿಲ್ಲ: ಭರಣ

Subscribe to Filmibeat Kannada
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡಲ್ಲಿ 'ದಳವಾಯಿ ಮುದ್ದಣ್ಣ'ನಾಗಿ ನಟಿಸುವ ಆಸೆಯನ್ನು ಕನ್ನಡ ಚಿತ್ರರಂಗದಅಮೃತ ಮಹೋತ್ಸವದಲ್ಲಿ ತೋಡಿಕೊಂಡಿದ್ದರು. ಆದರೆ ಆ ಪಾತ್ರ ರಜನಿಗೆ ಒಪ್ಪುವುದಿಲ್ಲ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ಚಿತ್ರನಿರ್ದೆಶಕ ಟಿ ಎಸ್ ನಾಗಾಭರಣ ಕಡ್ಡಿ ಮುರಿದಂತೆ ಹೇಳಿದ್ದಾರೆ.

ದಳವಾಯಿ ಮುದ್ದಣ್ಣನಾಗಿ ರಜನಿ ನಟಿಸಲು ಅವರ ವಯಸ್ಸು ಅಡ್ಡ ಬರುತ್ತದೆ ಎಂಬುದು ನಾಗಾಭರಣ ಅವರ ವಿವರಣೆ. ದಳವಾಯಿ ಮುದ್ದಣ್ಣ ಪಾತ್ರಕ್ಕೆ ಒಪ್ಪುವ ನಟ ಕನ್ನಡದಲ್ಲಿ ನನಗೆ ಯಾರೂ ಸಿಕ್ಕಿಲ್ಲ. ಆ ಪಾತ್ರಕ್ಕೆ ತುಂಬಾ ಪರಿಪಕ್ವವಾದ ಮನಸ್ಸು ಹಾಗೆಯೇ ಸೂಕ್ತ ವಯಸ್ಸು ಮುಖ್ಯ. ಈ ಹಿಂದೆಯೇ ದಳವಾಯಿ ಮುದ್ದಣ್ಣ ಚಿತ್ರವನ್ನು ಕೈಗೆತ್ತಿಕೊಂಡಿದ್ದೆ. ಪ್ರಕಾಶ್ ರೈ ಈ ಪಾತ್ರಕ್ಕಾಗಿ ತಯಾರಿ ನಡೆಸಿದ್ದರು. ಕಾರಣಾಂತರಗಳಿಂದ ದಳವಾಯಿ... ಚಿತ್ರ ಮಾಡಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಭರಣ.

ದಳವಾಯಿ ಮುದ್ದಣ್ಣನ ಚಿತ್ರಕ್ಕಾಗಿ ನಾಗಾಭರಣ ತಮ್ಮ ಪತ್ನಿ ನಾಗಿಣಿಯೊಂದಿಗೆ ಕಾಸ್ಟ್ಯೂಮ್ ಸಹ ಸಿದ್ಧಪಡಿಸಿದ್ದರಂತೆ, ದಳವಾಯಿ ಚಿತ್ರ ಕೈಬಿಟ್ಟ ಕಾರಣ ಆ ವೇಷಭೂಷಣಗಳನ್ನು 'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ಬಳಸಿಕೊಳ್ಳಲಾಯಿತು ಎನ್ನುತ್ತಾರೆ ನಾಗಾಭರಣ. ಅರ್ಜುನ್ ಸರ್ಜಾ ನಾಯಕ ನಟನಾಗಿ ಐತಿಹಾಸಿಕ ಚಿತ್ರ ನಿರ್ದೆಶಿಸುವ ಯೋಜನೆ ಭರಣಾ ಅವರಿಗಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರಾಗಿರುವ ಭರಣ, ಇದನ್ನು ಮಾದರಿ ಅಕಾಡೆಮಿಯನ್ನಾಗಿ ಮಾಡಬೇಕು ಎಂಬ ಅವರ ಕನಸನ್ನು ಕಟ್ಟಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡ ಚಿತ್ರದಲ್ಲಿ ನಟಿಸುವ ಆಸೆ: ರಜನಿಕಾಂತ್
ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್
ರಂಗುರಂಗಿನ ಅಮೃತ ಮಹೋತ್ಸವ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada