For Quick Alerts
  ALLOW NOTIFICATIONS  
  For Daily Alerts

  ಸಿದ್ದಲಿಂಗು ಕೈಹಿಡಿದ ಗೋಲ್ಡನ್ ಗರ್ಲ್ ರಮ್ಯಾ

  By Rajendra
  |

  ಗೋಲ್ಡನ್ ಗರ್ಲ್ ರಮ್ಯಾ ತಮ್ಮ ಮನಸನ್ನು ಕಡೆಗೂ ಬದಲಾಯಿಸಿಕೊಂಡಿದ್ದಾರೆ. ಲೂಸ್ ಮಾದ ಯೋಗೇಶ್ ಮುಖ್ಯಭೂಮಿಕೆಯಲ್ಲಿರುವ 'ಸಿದ್ದಲಿಂಗು' ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ. ಚಿತ್ರದ ಸಂಭಾಷಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ರಮ್ಯಾ ಈ ಚಿತ್ರವನ್ನು ಒಲ್ಲೆ ಎಂದಿದ್ದರು. ಸಂಭಾಷಣೆಯನ್ನು ಬದಲಾಯಿಸುವುದಾಗಿ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಭರವಸೆ ನೀಡಿರುವುದೇ ರಮ್ಯಾ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ.

  ಈ ವಿಷಯವನ್ನು ಸ್ವತಃ ರಮ್ಯಾ ಅವರು 'ಸಂಜು ವೆಡ್ಸ್ ಗೀತಾ' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ತಿಳಿಸಿದರು. ಸಂಜು ವೆಡ್ಸ್ ಗೀತಾ ಬಳಿಕ ತಾವು ಒಪ್ಪಿಕೊಳ್ಳುತ್ತಿರುವ ಚಿತ್ರ ಸಿದ್ಧಲಿಂಗು ಎಂದರು. ಚಿತ್ರದ ನಿರ್ದೇಶಕರು ನನ್ನ ಸಲಹೆ, ಸೂಚನೆಗಳನ್ನು ಒಪ್ಪಿದ್ದಾರೆ. ಸಂಭಾಷಣೆಯನ್ನು ಬದಲಾಯಿಸಲು ತಿಳಿಸಿದ್ದಾರೆ. ಹಾಗಾಗಿ ಚಿತ್ರವನ್ನು ಒಪ್ಪಿಕೊಂಡಿದ್ದೇನೆ ಎಂದರು.

  'ಸಿದ್ದಲಿಂಗು' ಚಿತ್ರದಲ್ಲಿ ಸಂಭಾಷಣೆ ಸರಿಯಿಲ್ಲ ಎಂಬ ಕಾರಣಕ್ಕೆ ರಮ್ಯಾ ನಿರ್ದೇಶಕರಿಗೆ ಎಸ್‌ಎಂಎಸ್ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದರು. ರಮ್ಯಾ ಚಿತ್ರದಿಂದ ಹಿಂದೆ ಸರಿದ ಕಾರಣ ನಿರ್ದೇಶಕರು ಭಾವನಾ, ಪಾರ್ವತಿ ಮೆನನ್ ಹಾಗೂ ರಾಧಿಕಾ ಪಂಡಿತ್ ಅವರನ್ನು ಸಂಪರ್ಕಿಸಿದ್ದರು. ಆದರೆ ರಮ್ಯಾ ತಮ್ಮ ನಿಲುವನ್ನು ಬದಲಾಯಿಸಿಕೊಂಡಿರುವುದು 'ಸಿದ್ದಲಿಂಗು' ಚಿತ್ರತಂಡದಲ್ಲಿ ಬದಲಾವಣೆಯ ಗಾಳಿ ಬಲವಾಗಿ ಬೀಸಿದೆ.

  English summary
  Actress Ramya finally accepts to act in Yogish starrer Siddalingu directed by Vijaya Prasad. She disclosed herself to the media persons when she was asked about her next film. Ramya was present in the success meet of Sanju Weds Geetha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X