»   » ಬ್ಯಾಂಕ್ ಗಳಿಗೇ 'ಟೋಪಿ' ಹಾಕಲಿದ್ದಾರೆ ಉಪೇಂದ್ರ

ಬ್ಯಾಂಕ್ ಗಳಿಗೇ 'ಟೋಪಿ' ಹಾಕಲಿದ್ದಾರೆ ಉಪೇಂದ್ರ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಟೋಪಿವಾಲನಾಗಿ ಬರುತ್ತಿರುವುದು ಗೊತ್ತೇ ಇದೆ. ಇತ್ತೀಚಿಗೆ ಬಿಡುಗಡೆಯಾಗಿ ನಿರೀಕ್ಷಿಸಿದಷ್ಟು ಯಶಸ್ಸು ಪಡೆಯದ ಆರಕ್ಷಕ ಚಿತ್ರದ ಬಗ್ಗೆ ಸ್ವತಃ ಉಪೇಂದ್ರ ಅದು 'ಅತಿ ಬುದ್ಧಿವಂತರಿಗೆ ಮಾತ್ರ' ಎಂದಿದ್ದರು. ಇದೀಗ ಕೆಪಿ ಶ್ರೀಕಾಂತ್ ನಿರ್ಮಾಣ ಹಾಗೂ ಶ್ರೀನಿವಾಸ್ ನಿರ್ದೇಶನದ ಟೋಪಿವಾಲಾ ಪ್ರೇಕ್ಷಕರೆದುರು ಬರಲು ಸಜ್ಜಾಗುತ್ತಿದೆ.

ಚಿತ್ರ ಸೋತರೂ ಗೆದ್ದರೂ ಉಪೇಂದ್ರ ಬಗ್ಗೆ ಇರುವ ಕ್ರೇಜ್ ಕಡಿಮೆಯಾಗದಂತೆ ನೋಡಿಕೊಳ್ಳುವುದು ಉಪೇಂದ್ರರಿಗಿರುವ ಜಾಣತನ. ಆರಕ್ಷಕ ಚಿತ್ರ ಸೋತರೂ ಕೂಡ ಪ್ರೇಕ್ಷಕರು ಉಪೇಂದ್ರ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಅದಕ್ಕೆ ಕಾರಣ ಉಪೆಂದ್ರ ಚಿತ್ರದಲ್ಲಿ ಸದ್ಯದ ಸಾಮಾಜಿಕ ಸ್ಥಿತಿಗತಿಗಳ ಕುರಿತು ಏನಾದರೂ ಮೆಸೇಜ್ ಹಾಗೂ ಡೈಲಾಗ್ ಗಳು ಇದ್ದೇ ಇರುತ್ತವೆ. ಅದು ಉಪೇಂದ್ರ ಪ್ರೇಕ್ಷಕರಿಗೆ ಇಷ್ಟವಾಗಿಯೇ ಆಗುತ್ತದೆ. ಹಾಗಾಗಿ ಟೋಪಿವಾಲಾಗೂ ನಿರೀಕ್ಷೆ ಸಹಜವಾಗಿದೆ.

ಉಪ್ಪಿಯ ಟೋಪಿವಾಲಾ ಚಿತ್ರದ ಕಥೆ ರಾಜಕೀಯ ಹಾಗೂ ಬ್ಯಾಂಕ್ ಗಳ ವ್ಯವಹಾರಕ್ಕೆ ಸಂಬಂಧಪಟ್ಟಿದೆಯಂತೆ. ಅದು ಅವುಗಳ ವ್ಯವಹಾರಕ್ಕೋ ಅಥವಾ ಅವ್ಯವಹಾರಕ್ಕೋ ಎಂಬುದು ಉಪೇಂದ್ರ ಅಭಿಮಾನಿಗಳ ಸಂದೇಹ. ಆದರೆ ಅವೆಲ್ಲಾ ವಿವರಣೆ ಸದ್ಯಕ್ಕೆ ಸಸ್ಪೆನ್ಸ್. ಆದರೆ ರಾಜಕೀಯ-ಬ್ಯಾಂಕ್ ಗಳ ಕಥೆ ಹೊಂದಿರುವ ಟೋಪಿವಾಲಾ ಚಿತ್ರ ಜನರನ್ನು ಆಕರ್ಷಿಸಲಿರುವುದು ಗ್ಯಾರಂಟಿ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Real Star Upendra's upcoming kannada movie 'Topiwala' has Politics and Bank Subject Storyline
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada