For Quick Alerts
  ALLOW NOTIFICATIONS  
  For Daily Alerts

  'ವಿಮುಕ್ತಿ' ಚಿತ್ರಪ್ರದರ್ಶನ ಮತ್ತು ಸಂವಾದ

  By Rajendra
  |

  ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್. ಫೆಬ್ರವರಿ 14 ರಂದು ತನ್ನ ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ ಕಾರ್ಯಕ್ರಮದಡಿಯಲ್ಲಿ ಪಿ.ಶೇಷಾದ್ರಿಯವರ ರಾಷ್ಟ್ರಪ್ರಶಸ್ತಿ ವಿಜೇತ 'ವಿಮುಕ್ತಿ' ಚಿತ್ರದ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.

  'ಸಮರ್ಪಕ ಸಿನೆಮಾ' ಇದು ಸೃಷ್ಟಿ ವೆಂಚರ್ಸ್‌ನ ಸದಭಿರುಚಿಯ ಮತ್ತು ಪ್ರಯೋಗಶೀಲ ಚಿತ್ರಗಳ ಪ್ರದರ್ಶನ ಹಾಗೂ ಸಂವಾದದ ಸರಣಿ ಕಾರ್ಯಕ್ರಮಗಳಲ್ಲಿ ಒಂದು. ಈ ಬಾರಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಗೆಲ್ಲುವ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ ಪಿ.ಶೇಷಾದ್ರಿಯವರ 'ವಿಮುಕ್ತಿ' ಚಿತ್ರದ ಪ್ರದರ್ಶನ ಹಾಗೂ ಐದು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದ ನಿರ್ದೇಶಕ ಪಿ.ಶೇಷಾದ್ರಿಯವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದೆ.

  ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ.ಶೇಷಾದ್ರಿ, ಹಿರಿಯ ನಟ ರಾಮಕ್ರಷ್ಣ , ಹಿರಿಯ ಚಿತ್ರವಿಮರ್ಶಕ ಕನ್ನಡಸಾಹಿತ್ಯ.ಕಾಂ ನ ಶೇಖರಪೂರ್ಣ, ಚಿತ್ರದ ಕಲಾವಿದರು ಹಾಗೂ ತಂತ್ರಜ್ಞ ರು ಭಾಗವಹಿಸಲಿದ್ದಾರೆ. ಭಾವನಾ, ರಾಮಕೃಷ್ಣ, ಹೋದಾ (ಇರಾನ್ ನಟಿ), ಬೇಬಿ ಸಾನಿಯಾ ಅಯ್ಯರ್ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರಕ್ಕೆ ಎಸ್. ರಾಮಚಂದ್ರ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಸಂಗೀತ ಹಾಗೂ ಕೆಂಪರಾಜ್ ಸಂಕಲನವಿದೆ.

  ಗಂಡು-ಹೆಣ್ಣುಗಳ ನಡುವಿನ ಸಂಬಂಧದ ಸ್ವರೂಪ ತುಂಬಾ ನಾಜೂಕು ಹಾಗೂ ಸಂಕೀರ್ಣವಾದುದು. ಈ ಸಂಬಂಧದ ಸಂಕೀರ್ಣತೆಯನ್ನ ತೀರಾ ಭಿನ್ನ ನೆಲೆಯೊಂದರ ಮೂಲಕ ಕಂಡರಿಸುವ ಪ್ರಯತ್ನ 'ವಿಮುಕ್ತಿ' ಚಲನಚಿತ್ರದ್ದು. ತಾಯಿಯ ಪ್ರೀತಿಯಿಂದ ವಂಚಿತಳಾದ ಮಗಳೊಬ್ಬಳು, ತಂದೆಯ ಮೇಲೆ ಅತಿಯಾದ ವ್ಯಾಮೋಹ/ಅವಲಂಬನೆ ಇಟ್ಟುಕೊಂಡಿರುವ ಮಾನಸಿಕ ಅಸ್ಥಿಮಿತವೇ 'ಎಲೆಕ್ಟ್ರೋ ಕಾಂಪ್ಲೆಕ್ಸ್'. ಈ ಅಸಹಜ ಹಾಗೂ ಅತಿ ವರ್ತನೆಗಳು ಆಕೆಯ ಕೌಟುಂಬಿಕ ಸಂಬಂಧಗಳನ್ನು ಬಿಗಡಾಯಿಸುತ್ತಾ ಹೋಗುತ್ತವೆ...

  ವಿವರಗಳಿಗೆ :

  ಸೃಷ್ಟಿ ವೆಂಚರ್ಸ್, ನಂ.81, 1 ನೇ ಮಹಡಿ,

  (ಪುಳಿಯೋಗರೆ ಪಾಯಿಂಟ್ ಮೇಲೆ)

  ಇಎಟಿ ರಸ್ತೆ, ಎನ್.ಆರ್.ಕಾಲೋನಿ,

  ಬಸವನಗುಡಿ, ಬೆಂಗಳೂರು-04.

  ಮೊಬೈಲ್: 99004 39930, 94481 71069, 99863 72503

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X