»   »  ಅಂಜದಿರು ಚಿತ್ರದಲ್ಲಿ ಅಂಜದ ಶುಭಾ ಪೂಂಜಾ!

ಅಂಜದಿರು ಚಿತ್ರದಲ್ಲಿ ಅಂಜದ ಶುಭಾ ಪೂಂಜಾ!

Subscribe to Filmibeat Kannada

ಚಿತ್ರವನ್ನು ಉತ್ಸಾಹದಿಂದ ಪೂರ್ಣಗೊಳಿಸಿದ ನಿರ್ಮಾಪಕನಿಗೆ ಚಿತ್ರ ಸೆನ್ಸಾರ್‌ಗೆ ಹೋಗುವ ಸಮಯದಲ್ಲಿ ಹೆದರಿಕೆ ಆವರಿಸುತ್ತದೆ. ನನ್ನ ಸಿನೆಮಾಗೆ ಯಾವ ಅರ್ಹತಾಪತ್ರ ದೊರಕುವುದು ಎಂಬ ಕಾತುರ ಅವರಲ್ಲಿ ಮನೆ ಮಾಡುತ್ತದೆ. ಸೆನ್ಸಾರ್ ತೀರ್ಪು ಬಂದ ಮೇಲಷ್ಟೇ ನಿರ್ಮಾಪಕ ನಿರಾಳ.

ಪ್ರೀಮಿಯರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೃಷ್ಣೇಗೌಡರ ಆಶೀರ್ವಾದದೊಂದಿಗೆ ಮುರುಳಿಧರ್ ನಿರ್ಮಿಸಿರುವ 'ಅಂಜದಿರು' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಕುತೂಹಲಕಾರಿ ಚಿತ್ರವಾದುದ್ದರಿಂದ ಶಬ್ದಗ್ರಹಣದ ಕಡೆ ಹೆಚ್ಚು ಒತ್ತು ಕೊಟ್ಟಿದ್ದು ಆದ್ದರಿಂದ ನಮ್ಮ ಚಿತ್ರಕ್ಕೆ ಯು/ಎ ಅರ್ಹತಾಪತ್ರ ದೊರಕಿದೆ ಎಂದು ತಿಳಿಸಿದ ನಿರ್ಮಾಪಕ ಮುರುಳಿಧರ್ ಮಂಡಲಿಯ ತೀರ್ಪಿಗೆ ಬದ್ದ ಎಂದಿದ್ದಾರೆ. ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ತರುವ ಯತ್ನ ನಿರ್ಮಾಪಕರಿಂದ ನಡೆಯುತ್ತಿದೆ.

ಅಂಜದಿರು ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಆದಿ ಲೋಕೇಶ್ ನಟಿಸಿದ್ದಾರೆ. ಅವರು ತಮ್ಮ ಪಾತ್ರದ ಬಗ್ಗೆ ಹೇಳಿದ್ದು, ಚಿತ್ರದಲ್ಲಿ ನನ್ನದು ಸಣ್ಣ ಪಾತ್ರವಾದರೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಟಿಸಿದ್ದೇನೆ. ಚಿತ್ರದ ನಾಯಕಿ ಶುಭಾ ಪೂಂಜಾ ಕಪಾಳಮೋಕ್ಷ ಮಾಡುವ ದೃಶ್ಯ ಅದ್ಭುತವಾಗಿ ಮೂಡಿ ಬಂದಿದೆ ಎನ್ನುತ್ತಾರೆ ಆದಿ ಲೋಕೇಶ್. ಅವರಿಗೆ ಕಪಾಳಮೋಕ್ಷ ಮಾಡುವಾಗ ಶುಭಾ ಪೂಂಜಾ ಅಂಜಿದ್ದರಂತೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಂಜದಿರು ಚಿತ್ರಪಟ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada