»   » ವಿಷ್ಣು ತಮಿಳು ಚಿತ್ರ 'ಮರುದನಾಯಗಂ'ಗೆ ಮರುಜೀವ

ವಿಷ್ಣು ತಮಿಳು ಚಿತ್ರ 'ಮರುದನಾಯಗಂ'ಗೆ ಮರುಜೀವ

Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ತಮಿಳು ಚಿತ್ರ 'ಮರುದನಾಯಗಂ' ಮತ್ತೆ ಜೀವ ಪಡೆದುಕೊಂಡಿದೆ. ಕಮಲ ಹಾಸನ್ ನಿರ್ಮಾಣ, ನಿರ್ದೇಶನದ 'ಮರುದನಾಯಗಂ' ಚಿತ್ರ ಆರ್ಥಿಕ ಕಾರಣದಿಂದ ಚಿತ್ರೀಕರಣ ನಿಲ್ಲಿಸಿತ್ತು. ಕೆಲ ವರ್ಷಗಳ ಹಿಂದೆ ಈ ಚಿತ್ರದಲ್ಲಿ ವಿಷ್ಣು ಅಭಿನಯಿಸಿದ್ದರು.

ವಿಷ್ಣು ಅಭಿನಯದ ಭಾಗದ ಚಿತ್ರೀಕರಣ ಮುಗಿಸಿಕೊಂಡಿದ್ದ 'ಮರುದನಾಯಗಂ' ಹಣಕಾಸಿನ ಕೊರತೆಯ ಕಾರಣ ಚಿತ್ರೀಕರಣ ನಿಲ್ಲಿಸಿತ್ತು. ಇದೀಗ ಕಮಲಹಾಸನ್ ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ಆರಂಭಿಸುವ ಬಗ್ಗೆ ಕಮಲ್ ಸುಳಿವು ನೀಡಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಅವರು, ಸದ್ಯದ ಆರ್ಥಿಕ ಸ್ಥಿತಿಗತಿಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವುದು ಕಷ್ಟ ಎಂದಿದ್ದರು. ಇದೀಗ ಕಮಲ್ ಮನಸ್ಸು ಬದಲಾಯಿಸಿಕೊಂಡು ಚಿತ್ರವನ್ನು ಕೈಗೆತ್ತಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ವಿಷ್ಣುವರ್ಧನ್ ಅಭಿನಯದ ತಮಿಳು ಚಿತ್ರ ಕಡೆಗೂ ಮರುಜೀವ ಪಡೆಯುವ ಕಾಲ ಸನ್ನಿಹಿತವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada