»   » ಕೋಟಿ ರೂಪಾಯಿ ವೆಚ್ಚದಲ್ಲಿ 'ದೊಡ್ಮನೆ ಹುಡುಗ' ಸಾಂಗ್ ಶೂಟ್

ಕೋಟಿ ರೂಪಾಯಿ ವೆಚ್ಚದಲ್ಲಿ 'ದೊಡ್ಮನೆ ಹುಡುಗ' ಸಾಂಗ್ ಶೂಟ್

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ದೊಡ್ಮನೆ ಹುಡುಗ' ಚಿತ್ರ ಕೊನೆಯ ಹಂತ ತಲುಪಿದ್ದು, ಇದೀಗ ಚಿತ್ರದ ಕೊನೆಯ ಹಾಡನ್ನು ಅದ್ದೂರಿ ವೆಚ್ಚದಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕ ದುನಿಯಾ ಸೂರಿ ನಿರ್ಧರಿಸಿದ್ದಾರೆ.

ಬಹಳ ಅದ್ದೂರಿಯಾಗಿ ಅಂತಿಮ ಹಾಡು ಮೂಡಿಬರಲಿದ್ದು, ಹಾಡಿನ ಚಿತ್ರೀಕರಣ ಜೂನ್ 22 ರಿಂದ ಆರಂಭವಾಗಲಿದೆ. ಚಿತ್ರದುರ್ಗದಲ್ಲಿ ಶೂಟಿಂಗ್ ಆರಂಭವಾಗಿ ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿಯಲ್ಲಿ ಮುಂದುವರೆದು ಕೊನೆಗೆ ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಚಿತ್ರೀಕರಣ ಕೊನೆಗೊಳ್ಳಲಿದೆ.['ದೊಡ್ಮನೆ ಹುಡುಗ'ನಿಗೆ ನಂಜನಗೂಡಿನಲ್ಲಿ ಆಗಿದ್ದೇನು?]


1.75 crores spent on Puneeth Rajkumar's 'Dodmane Huduga' song shoot

"ಇದ್ಕೊಂಡ್ ಹೇಳುವೆ ಅನ್ನದ ತುತ್ತು, ಕನ್ನಡ ತಾಯಿಗೆ ನನ್ನ ನಿಯತ್ತು, ದೊಡ್ಡೋರು ಹೇಳವ್ರೆ ನಿಮಗೆ ಗೊತ್ತು, ಅಭಿಮಾನಿಗಳೇ ನಮ್ಮನೆ ದೇವರು" ಎಂಬ ಹಾಡಿಗೆ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಬರೋಬ್ಬರಿ 1.75 ಕೋಟಿ ಬಜೆಟ್ ನಲ್ಲಿ ಸುಮಾರು 8 ದಿನಗಳ ಕಾಲ ಈ ಹಾಡನ್ನು ಶೂಟಿಂಗ್ ಮಾಡಲು ಚಿತ್ರತಂಡ ವಿಶೇಷವಾಗಿ ಪ್ಲ್ಯಾನ್ ಮಾಡಿಕೊಂಡಿದೆ.[2 ಕೋಟಿ ರೂ.ವೆಚ್ಚದಲ್ಲಿ ಸುದೀಪ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್]


1.75 crores spent on Puneeth Rajkumar's 'Dodmane Huduga' song shoot

ಅಂದಹಾಗೆ ವಿಶೇಷವಾಗಿ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಹಾಡಿದ್ದು, ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ 14 ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ನಿರ್ದೇಶಕ ಕಮ್ ನೃತ್ಯ ನಿರ್ದೇಶಕ ಹರ್ಷ ಅವರು ನೃತ್ಯ ನಿರ್ದೇಶನ ಮಾಡಲಿದ್ದಾರೆ.


ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಜನಪ್ರಿಯ ಹಾಡಿನ ನಂತರದ ಸ್ಥಾನವನ್ನು 'ದೊಡ್ಮನೆ ಹುಡುಗ' ಚಿತ್ರದ ಈ ಅದ್ದೂರಿ ಹಾಡು ಪಡೆದುಕೊಳ್ಳುವ ಭರವಸೆ ಇದೆ ಎನ್ನುತ್ತಾರೆ ನಿರ್ದೇಶಕ ದುನಿಯಾ ಸೂರಿ ಅವರು. ಒಟ್ನಲ್ಲಿ ಈ ಹಾಡು ದಾಖಲೆ ಸೃಷ್ಟಿ ಮಾಡೋದು ಖಂಡಿತ ಅನ್ಸುತ್ತೆ.[ಅಂಬರೀಶ್ ಹುಟ್ಟುಹಬ್ಬಕ್ಕೆ 'ದೊಡ್ಮನೆ'ಯಿಂದ ಸಿಕ್ಕ ಉಡುಗೊರೆ ಇದು.!]


1.75 crores spent on Puneeth Rajkumar's 'Dodmane Huduga' song shoot

ನಟ ಅಂಬರೀಶ್, ನಟಿ ಸುಮಲತಾ ಅಂಬರೀಶ್ ಮತ್ತು ಭಾರತಿ ವಿಷ್ಣುವರ್ಧನ್ ಕಾಣಿಸಿಕೊಂಡಿರುವ 'ದೊಡ್ಮನೆ ಹುಡುಗ' ಚಿತ್ರದ ಫನ್ನಿ ಮೇಕಿಂಗ್ ವಿಡಿಯೋ ಇಲ್ಲಿದೆ ಒಮ್ಮೆ ನೋಡಿ.....


English summary
Director Duniya Soori is set to make it a grand affair for the final song for Kannada movie 'Doddmane Hudga', which he will be shooting with Kannada Actor Puneeth Rajkumar from June 22. And it will cost the producer spent 1.75 crores for speceial song. Kannada Actress Radhika Pandith, Actor Ambareesh, Actress Bharathi Vishnuvardhan in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada