»   » ಬಿಡುಗಡೆ ಹೊಸ್ತಿಲಲ್ಲಿ ಮಮ್ಮುಟ್ಟಿ ಕನ್ನಡ ಚಿತ್ರ ಶಿಕಾರಿ

ಬಿಡುಗಡೆ ಹೊಸ್ತಿಲಲ್ಲಿ ಮಮ್ಮುಟ್ಟಿ ಕನ್ನಡ ಚಿತ್ರ ಶಿಕಾರಿ

Posted By:
Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಭಯ್ ಸಿಂಹ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ 'ಶಿಕಾರಿ'. ಅವರ ಚೊಚ್ಚಲ ನಿರ್ದೇಶನದ 'ಗುಬ್ಬಚ್ಚಿಗಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಒಲಿದಿತ್ತು. ಕೆ.ಮಂಜು ನಿರ್ಮಿಸಿರುವ ಶಿಕಾರಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಮಾರ್ಚ್ 9ರಂದು ಶಿಕಾರಿ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ.

'ಶಿಕಾರಿ' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮಮ್ಮುಟ್ಟಿ ಕನ್ನಡಕ್ಕೆ ಬರುತ್ತಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ಆದಿತ್ಯ, ಮೋಹನ್, ನೀನಾಸಂ ಅಚ್ಯುತ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್ ಮುಂತಾದವರಿದ್ದಾರೆ. ಚಿತ್ರದ ನಾಯಕಿ ಪೂನಂ ಬಾಜ್ವಾ. ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಚಿತ್ರ.

'ಶಿಕಾರಿ' ಚಿತ್ರದಲ್ಲಿ ಮಮ್ಮುಟ್ಟಿ ಅವರದು ಸಾಫ್ಟ್‌ವೇರ್ ಟೆಕ್ಕಿ ಪಾತ್ರವಂತೆ. ಕಾದಂಬರಿ ಓದುವುದೆಂದರೆ ಈ ಟೆಕ್ಕಿಗೆ ಎಲ್ಲಿಲ್ಲದ ಹುಚ್ಚು. ಬಳಿಕ ಕಾದಂಬರಿಯಲ್ಲಿನ ಒಂದು ಪಾತ್ರವನ್ನು ಕಲ್ಪಿಸಿಕೊಂಡು ತಾನೇ ಆ ಪಾತ್ರವಾಗುವುದು ಈ ಟೆಕ್ಕಿಯ ವಿಚಿತ್ರ ಹವ್ಯಾಸ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)

English summary
Abhay Simha directed Kannada movie Shikari will be releasing on March 9. Malayalam Super Star Mammotty in the lead while Poonam Bajwa is the heroine of this film.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X