For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಗೈರುಹಾಜರಿಯಲ್ಲಿ 'ಲಕ್ಕಿ' ಚಿತ್ರದ ಸಂಭ್ರಮ

  By Rajendra
  |

  ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚೊಚ್ಚಲ 'ಲಕ್ಕಿ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಂತೋಷಕೂಟ ಏರ್ಪಡಿಸಿತ್ತು. ಪಂಚತಾರಾ ಹೋಟೆಲೊಂದರಲ್ಲಿ ನಡೆದ ಸಂತೋಷಕೂಟದಲ್ಲಿ ಚಿತ್ರದ ನಾಯಕಿ ರಮ್ಯಾ ಹಾಗೂ ನಾಯಕ ನಟ ಯಶ್ ಸೇರಿದಂತೆ ಹಲವು ತಾರೆಗಳು ಭಾಗಿಯಾಗಿದ್ದರು.

  ಶ್ವೇತವರ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ರಮ್ಯಾ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಅಂದವಾಗಿ ತೋರಿಸಿದ ಛಾಯಾಗ್ರಹಕ ಕೃಷ್ಣ ಅವರಿಗೆ ಥ್ಯಾಂಕ್ಸ್ ಹೇಳಿದರು. ಉತ್ತರ ಕರ್ನಾಟಕದಲ್ಲಂತೂ 'ಲಕ್ಕಿ' ಚಿತ್ರಕ್ಕೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ ಎಂಬ ಮಾತುಗಳು ಕೇಳಿಬಂದವು.

  'ಲಕ್ಕಿ' ಚಿತ್ರದ ಮೂಲಕ ನಿರ್ದೇಶಕ ಡಾ.ಸೂರಿ ಅವರಿಗೂ ಅದೃಷ್ಟ ಖುಲಾಯಿಸಿದೆಯಂತೆ. ಆದರೆ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ಚಿತ್ರದ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಗೈರುಹಾಜರಾಗಿದ್ದರು. ಅನಾರೋಗ್ಯದ ಕಾರಣ ಅವರು ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲವಂತೆ. (ಏಜೆನ್ಸೀಸ್)

  English summary
  Kannada movie Lucky showing successfully all over Karnataka and especially in North Karnataka region. Recently the success meet held in Bangalore. But the movie producer Radhika Kumaraswamy not present in the function due to in ill health.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X