»   » 5ters ಮಕ್ಕಳ ಚಿತ್ರ ಹೆಮ್ಮೆಯ ವಿಷಯ, ಒಂದು ವಿಷಾದ

5ters ಮಕ್ಕಳ ಚಿತ್ರ ಹೆಮ್ಮೆಯ ವಿಷಯ, ಒಂದು ವಿಷಾದ

Posted By:
Subscribe to Filmibeat Kannada
Date :04/04/2011 Name : Malnad URL Link : ‎‎Author Name : Title : Meta description : Key Words: Tag : Kannada Title : Kannada Short Title : Index : Section : new
ಕನ್ನಡದ ಒಂದಷ್ಟು ಪ್ರತಿಭಾವಂತರು ಸೇರಿ 5ters- Castle of Dark Master Movie| ಎಂಬ ಮಕ್ಕಳ ಅನಿಮೇಷನ್ ಚಿತ್ರವನ್ನು ತೆರೆಗೆ ತಂದಿದ್ದಾರೆ. ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ಈ ಚಿತ್ರವನ್ನು ನೋಡಿ ಆನಂದಿಸಬಹುದು. ನಮ್ಮವರೆ ನಿರ್ಮಿಸಿದ ಈ ಚಿತ್ರ ಕನ್ನಡ ಮಕ್ಕಳಿಗೆ ತಮ್ಮ ಭಾಷೆಯಲ್ಲೇ ನೋಡುವ ಸೌಭಾಗ್ಯವಿಲ್ಲ. ಅಭಿನಯ ತರಂಗದಲ್ಲಿ ತರಬೇತಿ ಪಡೆದ ಈ ಚಿತ್ರ ಐವರು ಚಿಣ್ಣರು ಅದ್ಭುತವಾಗಿ ನಟಿಸಿದ್ದಾರೆ ಎಂದು ನಟ ಅವಿನಾಶ್ ಹಾಡಿ ಹೊಗಳಿದ್ದಾರೆ.

ಚಿತ್ರದ ಕಥೆ ಹಳೆ ಕನ್ನಡ ಮಕ್ಕಳ ಚಿತ್ರದಂತೆ ಇದೆ. ಶಾಲಾ ಪ್ರವಾಸಕ್ಕೆಂದು ಹೊರಟ ಐದು ಮಕ್ಕಳು ಕಾಡಲ್ಲಿ ತಪ್ಪಿ ಸಿಕೊಳ್ಳುತ್ತಾರೆ. ಮುಂದೆ ಮಕ್ಕಳ ಕಥೆ ಭಯ, ಕುತೂಹಲ, ಆಶ್ಚರ್ಯ, ಧೈರ್ಯ ಮತ್ತು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಸಾಗುತ್ತದೆ. 2ಡಿ ಹಾಗೂ 3ಡಿ ಚಿತ್ರದಲ್ಲಿ ಯಥೇಚ್ಛವಾಗಿ ಅನಿಮೇಷನ್ ಕೂಡಾ ಇದ್ದು ಮಕ್ಕಳ ಮನ ಗೆಲ್ಲಲಿದೆ ಎನ್ನುತ್ತಾರೆ ನಿರ್ದೇಶಕ ಜಿ ವೇಣುಗೋಪಾಲ್.

ಬಾಲ ಕಲಾವಿದರಾದ ಸಾಮ್ರಾಟ್, ಹಿತೇಶಿನಿ, ಆಕಾಶ್, ತೇಜ ಮತ್ತು ಗಗನ್ ಅವರ ನಟನೆಯನ್ನು ಹೊಗಳಿದ ಅವಿನಾಶ್, ಇಂಥ ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿರುವುದು ನನಗೆ ತೃಪ್ತಿಕೊಟ್ಟಿ ಎಂದಿದ್ದಾರೆ. ಹಿರಿಯ ಚಿತ್ರಕರ್ಮಿ ಕೆಎಸ್ ಎಲ್ ಸ್ವಾಮಿ ಹಾಗೂ ಮಂಜುನಾಥ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಬಿವಿ ರಾಧ ಅವರ ಅಕ್ಕನ ಮಗಳು ವಿಜಯಲಕ್ಷ್ಮಿ ಅವರು ಈ ಮಕ್ಕಳ ಚಿತ್ರಕ್ಕೆ ಸೊಗಸಾದ ಕಥೆ ಹೆಣೆದಿದ್ದಾರೆ. ಸವಾರಿ ಖ್ಯಾತಿಯ ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಪೂರಕವಾಗಿದೆ.

Morphosys Information Services ಸಂಸ್ಥೆ ಹೊರ ತಂದಿರುವ ಈ ಚಿತ್ರ ಈ ವಾರ ದೇಶದಾದ್ಯಂತ ಬಿಡುಗಡೆಗೊಂಡು ಜನ ಮೆಚ್ಚುಗೆ ಗಳಿಸುತ್ತಿದೆ. ಕನ್ನಡ ಮಕ್ಕಳು ಡಬ್ಬಿಂಗ್ ದೇವರ ಕೃಪೆ ಸಿಗದೆ ಹಿಂದಿ ಭಾಷೆಯಲ್ಲೇ ನೋಡಿ ಕೆಲವರು ಆನಂದಿಸಿದ್ದಾರೆ. ಮತ್ತೆ ಕೆಲವರು ಅದ್ಭುತವಾದ ದೃಶ್ಯಕಾವ್ಯ ನೋಡಿ ಭಾಷೆ ಬೇಲಿಯನ್ನು ಹಾರಿದ್ದಾರೆ.

English summary
5ters- Castle of Dark Master a Multi-Lingual Children Film directed by G Venugopal. A blend of 2D and 3D animation film is on the adventure of five children who get lost in the forest when they come in a school trip. Avianash also in the cast. Movie can be watched in Hindi, Tamil, Telugu and Malayalam but not in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada