»   » ಐಂದ್ರಿತಾ ಕಪಾಳಮೋಕ್ಷಕ್ಕೆ ದೊಡ್ಡಣ್ಣ ಪ್ರತಿಕ್ರಿಯೆ

ಐಂದ್ರಿತಾ ಕಪಾಳಮೋಕ್ಷಕ್ಕೆ ದೊಡ್ಡಣ್ಣ ಪ್ರತಿಕ್ರಿಯೆ

Posted By:
Subscribe to Filmibeat Kannada

ನಟ, ನಟಿಯರು ಚಿತ್ರೀಕರಣಕ್ಕೆ ತಡವಾಗಿ ಬರುತ್ತಿದ್ದಾರೆ, ಸೆಟ್ಸ್ ನಲ್ಲಿ ಅಶಿಸ್ತು ಮಿತಿ ಮೀರುತ್ತಿದೆ ಎಂಬ ಅಪಸ್ವರಗಳು ಕನ್ನಡ ಚಿತ್ರೋದ್ಯಮಕ್ಕೆ ಹೊಸದಲ್ಲ. 'ನೂರು ಜನ್ಮಕು' ಚಿತ್ರೀಕರಣ ವೇಳೆ ಐಂದ್ರಿತಾ ರೇಗೆ ಕಪಾಳಮೋಕ್ಷ ಮಾಡಿದಂತಹ ಘಟನೆಗಳು ಪದೇಪದೇ ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಕನ್ನಡ ಹಿರಿಯನಟ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರ ಆತ್ಮೀಯರೂಆಗಿರುವ ದೊಡ್ಡಣ ಏನಂತಾರೆ ಬನ್ನಿ ಕೇಳೋಣ.

ನಾಗತಿಹಳ್ಳಿ ಅವರು ಐಂದ್ರಿತಾ ರೇ ಕೆನ್ನೆಗೆ ಹೊಡೆದಿದ್ದಾರೆ ಎಂದರೆ, ಇದೊಂದು ರೀತಿ ನಂಬಲಸಾಧ್ಯವಾದಂತಹ ಸುದ್ದಿ. ಅವರು ಯಾವತ್ತೂ ಸಿಟ್ಟಾದವರಲ್ಲ. ಎಲ್ಲೋ ಎಡವಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸುವರ್ಣ ವಾಹಿನಿಯೊಂದಿಗೆ ಅವರು ಮಾತನಾಡುತ್ತಾ, ನಿರ್ಮಾಪಕ ಎಂದರೆ ತಂದೆ ಇದ್ದಂತೆ. ನಮ್ಮಂತಹವರಿಗೆಲ್ಲಾ ಅವರೇ ಅನ್ನದಾತರು.ಇದನ್ನು ನಟ, ನಟಿಯರು ನೆನಪಿಡಬೇಕು. ಒಂದು ಕುಟುಂಬ ಎಂದ ಮೇಲೆ ಸಣ್ಣಪುಟ್ಟ ತೊಂದರೆ, ಜಗಳ ಇದ್ದೇ ಇರುತ್ತದೆ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದಿದ್ದಾರೆ ದೊಡ್ಡಣ್ಣ.

ನಾನು ಏನು ಅಲ್ಲ ಎಂದು ತಿಳಿದುಕೊಂಡರೆ ಈ ರೀತಿಯ ಸಮಸ್ಯೆಗಳೇ ಬರಲ್ಲ. ನಾನು ಮಹಾನ್ ಎಂದು ತಿಳಿದರೆ ಮಾತ್ರ ಹೀಗಾಗುತ್ತದೆ. ಸಿನಿಮಾ ಎಂಬುದು ದೊಡ್ಡ ಬಳಗ ಇದ್ದಂತೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಚಿತ್ರೀಕರಣವನ್ನು ನಿಲ್ಲಿಸಬಾರದು ಎಂಬ ಕಿವಿಮಾತನ್ನು ದೊಡ್ಡಣ್ಣ ಹೇಳಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada