»   »  ಸಂತ್ರಸ್ತರ ನೆರವಿಗೆ ಬೀದಿಗಿಳಿದ ವಿಷ್ಣುವರ್ಧನ್

ಸಂತ್ರಸ್ತರ ನೆರವಿಗೆ ಬೀದಿಗಿಳಿದ ವಿಷ್ಣುವರ್ಧನ್

Subscribe to Filmibeat Kannada

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸಹ ಕೈಜೋಡಿಸಿದ್ದಾರೆ. ವಿಷ್ಣುವರ್ಧನ್ ಅವರ ಸ್ನೇಹಲೋಕ ತಂಡ ನಿಧಿ ಸಂಗ್ರಹ ಮಾಡುವುದಕ್ಕೆ ಸಿದ್ಧತೆ ನಡೆಸಿದೆ. ಅಕ್ಟೋಬರ್ 11ರ ಭಾನುವಾರ ಬೆಳಗ್ಗೆ ವಿಷ್ಣುವರ್ಧನ್ ಸಾರಥ್ಯದ ತಂಡ ನಿಧಿ ಸಂಗ್ರಹಕ್ಕಾಗಿ ಹೊರಡಲಿದೆ.

ಬೆಂಗಳೂರಿನ ಜಯನಗರ, ಬಸವನಗುಡಿ, ಗಾಂಧಿ ಬಜಾರ್ ಮೊದಲಾದೆಡೆ ಸ್ನೇಹಲೋಕ ತಂಡ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಲಿದೆ. ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಈ ರೋಡ್ ಷೋನಲ್ಲಿ ವಿಷ್ಣುವರ್ಧನ್ ಅವರ ಜೊತೆ ಕೈ ಜೋಡಿಸಲಿದ್ದಾರೆ.

ಸ್ನೇಹಲೋಕ ತಂಡವು ಪ್ರತಿ ತಿಂಗಳ ಎರಡನೇ ಭಾನುವಾರ ಜಯನಗರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುವ ಪರಿಪಾಠವಿದೆ. ಆದರೆ ಈ ಭಾನುವಾರ ಕ್ರಿಕೆಟ್ ಜೊತೆಗೆ ನಿಧಿ ಸಂಗ್ರಹ ಕಾರ್ಯದಲ್ಲೂ ತೊಡಗಿಕೊಳ್ಳಲಿದೆ. ಒಟ್ಟಿನಲ್ಲಿ ನೆರೆ ಸಂತ್ರಸ್ತರ ನೆರೆವಿಗಾಗಿ ತಾರೆಗಳು ಭೂಮಿಗಿಳಿಯುತ್ತಿರುವುದು ಮೆಚ್ಚಬೇಕಾದ ಸಂಗತಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada