»   » ಚಿತ್ರರಂಗ ತೊರೆಯುತ್ತೇನೆ: ಅಮೂಲ್ಯ ಅಳಲು

ಚಿತ್ರರಂಗ ತೊರೆಯುತ್ತೇನೆ: ಅಮೂಲ್ಯ ಅಳಲು

Posted By:
Subscribe to Filmibeat Kannada

ಅಸಹ್ಯ ಹುಟ್ಟಿಸುತ್ತಿರುವ ಚುಂಬನ ದೃಶ್ಯದ ಬಗ್ಗೆ ನಟಿ ಅಮೂಲ್ಯ ಖೇದ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿರುವುದು ತಾವಲ್ಲ.ತಮ್ಮಂತೆಯೇ ಹೋಲುವ ಯುವತಿಯೊಬ್ಬಳ ಭಾವಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ಘಟನೆಯಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರರಂಗ ತೊರೆಯುವುದಾಗಿ ಅಮೂಲ್ಯ ತಿಳಿಸಿದ್ದಾರೆ.

ನಮ್ಮನ್ನು ಬಲಿಪಶು ಮಾಡಲು ಯಾರೋ ಕಿಡಿಗೇಡಿಗಳು ಸೃಷ್ಟಿಸಿದ ವಿಡಿಯೋ ಇದು. ಹಣ ಮಾಡುವ ಅಥವಾ ಶೋಕಿ ಮಾಡುವ ಉದ್ದೇಶದಿಂದ ನಾನು ಚಿತ್ರರಂಗಕ್ಕೆ ಬಂದಿಲ್ಲ.ಕೀಳು ಚಟುವಟಿಕೆಗಳಿಂದ ಹಣ ಮಾಡುವ ಉದ್ದೇಶ ನನಗಿಲ್ಲ ಎಂದು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಇದೇ ರೀತಿ ಕೀಳು ಮಟ್ಟದ ಪ್ರಚಾರ ಮುಂದುವರೆದರೆ ಸದ್ಯಕ್ಕೆ ತಮ್ಮ ಕೈಯಲ್ಲಿರುವ ಚಿತ್ರಗಳನ್ನು ಮುಗಿಸಿ ಚಿತ್ರರಂಗಕ್ಕೆ ವಿದಾಯ ಹೇಳುತ್ತೇನೆ ಎಂದಿದ್ದಾರೆ. ನನ್ನಂತಹ ಹೆಣ್ಣು ಮಕ್ಕಳ ಜೀವನಕ್ಕೆ ಮಸಿ ಬಳಿಯುವ ಪ್ರಯತ್ನವಿದು. ಇಲ್ಲಿ ಭದ್ರತೆ ಎಂಬುದೇ ಇಲ್ಲ. ಮನಬಂದಂತೆ ಅಪಪ್ರಚಾರ ಮಾಡಲಾಗುತ್ತಿದೆ. ಯಾರು ಯಾರ ಬಗ್ಗೆ ಬೇಕಾದರೂ ಅಪಪ್ರಚಾರ ಮಾಡಬಹುದು ಎಂದು ನೊಂದು ನುಡಿದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada