»   » ಹೆಂಡ್ತೀರ ದರ್ಬಾರ್ ಗೆ ಫ್ಯಾಮಿಲಿ ಸಾಂಗ್

ಹೆಂಡ್ತೀರ ದರ್ಬಾರ್ ಗೆ ಫ್ಯಾಮಿಲಿ ಸಾಂಗ್

Posted By:
Subscribe to Filmibeat Kannada

ಸಂಪೂರ್ಣ ಹಾಸ್ಯ ಚಿತ್ರ ಹೆಂಡ್ರೀರ ದರ್ಬಾರ್ ಗೆ ಎಂ.ಡಿ.ಕೌಶಿಕ್‌ರ ಪುಟ್ಟಣ್ಣ ಸ್ಟುಡಿಯೋದಲ್ಲಿ ಕಳೆದ ವಾರ ಸಾಂಸಾರಿಕ ಸಂತೋಷಭರಿತ ಹಾಡೊಂದರ ಚಿತ್ರೀಕರಣ ನಡೆಯಿತು. ರಾಮು ನೃತ್ಯ ನಿರ್ದೇಶನದ ಈ ಹಾಡಿನಲ್ಲಿ ನಾಯಕ ರಮೇಶ್ ಅರವಿಂದ್ ಮೀನಾ, ವೃಷಭ ಹಾಗೂ ಬೇಬಿ ಋಷಿಕಾ ಅಭಿನಯಿಸಿದ್ದಾರೆ.

ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ಸಂತಸದಿಂದ ಕುಣಿಯುವ ಈ ಹಾಡಿನ ನಂತರ ಬಾಕಿ ಉಳಿದ ಇನ್ನೊಂದು ಹಾಡನ್ನು ಸದ್ಯದಲ್ಲೇ ಚಿತ್ರೀಕರಿಸಲಾಗುವುದು. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು ಕಳೆದ ಶನಿವಾರದಿಂದ ಆದರ್ಶ ಧ್ವನಿಗ್ರಹಣ ಕೇಂದ್ರದಲ್ಲಿ ಡಬ್ಬಿಂಗ್ ಕಾರ್ಯ ಪ್ರಾರಂಭವಾಗಿದೆ. ಮಧ್ಯಮ ವರ್ಗದವರ ಸಮಸ್ಯೆಗಳಲ್ಲಿ ಹಾಸ್ಯದ ಮೂಲಕ ಹೇಳಲಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ವಿ.ಶೇಖರ್.

ವರವು ಎತ್ತಣ, ಸಲವು ಪತ್ತಣ ಎಂಬ ತಮಿಳು ಚಿತ್ರದ ರೀಮೇಕ್ ಆದ ಹೆಂಡ್ತೀರ ದರ್ಬಾರ್‌ನಲ್ಲಿ ರಂಗಾಯಣ ರಘು, ಸಾಧುಕೋಕಿಲ, ಅಂಬಿಕಾ ಸೋನಿ ಹಾಗೂ ಪ್ರೀತಿ, ಪ್ರಮುಖ ತಾರಾಗಣದಲ್ಲಿದ್ದಾರೆ. ರಾಜು ಮಹೇಂದ್ರನ್ ಛಾಯಾಗ್ರಹಣ, ಸಾಧುಕೋಕಿಲ ಸಂಗೀತ, ಎಸ್.ಮೋಹನ್ ಸಂಭಾಷಣೆ ಈ ಚಿತ್ರಕ್ಕಿದೆ. ಜಿ.ಆರ್.ಗೋಲ್ಡ್ ಫಿಲಂಸ್ ಲಾಂಛನದಲ್ಲಿ ಜಿ.ರಾಮಚಂದ್ರನ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada