»   » 'ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು

'ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು

Posted By:
Subscribe to Filmibeat Kannada

ಅಕ್ಟೋಬರ್ 18, 2004 ರಂದು ಪೊಲೀಸ್ ಅಧಿಕಾರಿಗಳು ನೆಮ್ಮದಿಯ ಉಸಿರು ಬಿಟ್ಟಿದ್ದರು, ಯಾಕೆಂದರೆ ಅಂದು ಕುಖ್ಯಾತ ಕಾಡುಗಳ್ಳ, ದಂತಚೋರ ವೀರಪ್ಪನ್ ಶೂಟೌಟ್ ಆದ ದಿನ. ತಮಿಳು ಪೊಲೀಸ್ ಒಬ್ಬರ ಗುಂಡೇಟಿಗೆ ಸ್ಮಗ್ಲರ್ ವೀರಪ್ಪನ್ ಸಿಕ್ಕಿಬಿದ್ದು ಪ್ರಾಣ ಬಿಟ್ಟಿದ್ದ.

ಈ ಮೊದಲು ಕಾಡುಗಳ್ಳ ವೀರಪ್ಪನ್ ನಿಜ ಜೀವನಚರಿತ್ರೆಯಾಧರಿತ ಸಿನಿಮಾ 'ಅಟ್ಟಹಾಸ', ಬಂದಿದ್ದರು ಕೂಡ ಇದೀಗ ಮತ್ತೊಮ್ಮೆ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಕಿಲ್ಲಿಂಗ್ ವೀರಪ್ಪನ್' ಎಂಬ ಚಿತ್ರದ ಮೂಲಕ ಯಥಾವತ್ತಾಗಿ ವೀರಪ್ಪನ್ ಆರ್ಭಟವನ್ನು ತೆರೆ ಮೇಲೆ ತಂದಿದ್ದಾರೆ.[ಟ್ರೈಲರ್: ದೊಡ್ಡ ಯುದ್ಧ ಗೆಲ್ಲ ಬೇಕು ಅಂದ್ರೆ, ಸಣ್ಣ ಸಣ್ಣ ಯುದ್ದ ಸೋಲಬೇಕು]

ಈಗಾಗಲೇ ಸಿನಿಮಾ ಕಂಪ್ಲೀಟ್ ಆಗಿದ್ದು, ಚಿತ್ರದ ಸೆಕೆಂಡ್ ಟ್ರೈಲರ್ ವೀರಪ್ಪನ್ ಮರಣ ಹೊಂದಿದ ದಿನ (ಅಕ್ಟೋಬರ್ 18, 2004) ಬಿಡುಗಡೆಯಾಗಿದೆ. ಸದ್ಯಕ್ಕೆ ಚಿತ್ರದ ಟ್ರೈಲರ್ ಎಲ್ಲೆಡೆ ಸಖತ್ ಸೌಂಡ್ ಮಾಡ್ತಾ ಇದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪೆಷಲ್ ಪೊಲೀಸ್ ಆಫೀಸರ್ ಆಗಿ ವೀರಪ್ಪನ್ ಬೇಟೆಯಾಡಲು ಸಿದ್ದವಾಗಿದ್ದಾರೆ. ಇದೀಗ ಬಹುನಿರೀಕ್ಷಿತ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ಸಿದ್ದವಾಗಿದ್ದು, ನವೆಂಬರ್ 6 ರಂದು ಸುಮಾರು 3000 ಥಿಯೇಟರ್ ಗಳಲ್ಲಿ ತೆರೆ ಕಾಣಲಿದೆ.[ಶಿವಣ್ಣ 'ಕಿಲ್ಲಿಂಗ್ ವೀರಪ್ಪನ್', ಚಿತ್ರದಿಂದ ಒಂದು ಗುಡ್ ನ್ಯೂಸ್!]

ಇನ್ನು 'ಕಿಲ್ಲಿಂಗ್ ವೀರಪ್ಪನ್' ಸೆಕೆಂಡ್ ಟ್ರೈಲರ್ ನಲ್ಲಿರುವ ಸುಮಾರು 10 ಕುತೂಹಲಕಾರಿ ವಿಷಯಗಳನ್ನು ನಾವು ನಿಮಗೆ ತಿಳಿಸ್ತಿವಿ ನೋಡಲು ಕೆಳಗಿನ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ..

ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಭಾರದ್ವಾಜ್

ಥಿಯೇಟರ್ ಆರ್ಟಿಸ್ಟ್ ಸಂದೀಪ್ ಭಾರದ್ವಾಜ್ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಕುಖ್ಯಾತ ಕಾಡುಗಳ್ಳ ದಂತಚೋರ ವೀರಪ್ಪನ್ ಪಾತ್ರದಲ್ಲಿ ಮಿಂಚಿದ್ದಾರೆ. ಇಡೀ ಈ ಚಿತ್ರದಲ್ಲಿ ಇವರದೇ ಮುಖ್ಯವಾದ ಪಾತ್ರ. ಜೊತೆಗೆ ಇಡೀ ಚಿತ್ರದ ಕೇಂದ್ರಬಿಂದು ಕೂಡ ಸಂದೀಪ್ ಭಾರದ್ವಾಜ್ ಆಗಿದ್ದಾರೆ.[ನವೆಂಬರ್ 6ರಂದು ತೆರೆಗೆ ಅಪ್ಪಳಿಸಲಿದೆ 'ಕಿಲ್ಲಿಂಗ್ ವೀರಪ್ಪನ್']

ಖಡಕ್ ಪೊಲೀಸ್ ಆಫೀಸರ್ ಆಗಿ ಶಿವಣ್ಣ

ಆರ್ ಜಿ ವಿ ಹಾಗು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಶಿವಣ್ಣ ಅವರು ಖಡಕ್ ಸ್ಪೆಷಲ್ ಆಫೀಸರ್ ಆಗಿ 'ಸಾಯೋದಕ್ಕಿಂತ ಮುಂಚೆ ಏನಾದ್ರೂ ಮಾಡಬೇಕು ಅನ್ನೋದಿದ್ರೆ, ಆ ವೀರಪ್ಪನ್ ನ ಕೊಂದೆ ಸಾಯೋದು' ಅಂತ ಸಖತ್ ಡೈಲಾಗ್ ಹೊಡೆದಿದ್ದಾರೆ.

ಸ್ಪೆಷಲ್ ಕಾಪ್ ಆಗಿ ಪಾರುಲ್ ಯಾದವ್

ಗ್ಲಾಮರ್ ಬೆಡಗಿ 'ಪ್ಯಾರ್ಗೆ ಆಗ್ಬುಟ್ಟೈತೆ' ಹುಡುಗಿ ಪಾರುಲ್ ಯಾದವ್ ಅವರು ಇದೇ ಮೊದಲ ಬಾರಿಗೆ ಸೂಪರ್ ಸ್ಪೆಷಲ್ ಕಾಪ್ ಪಾತ್ರದಲ್ಲಿ ಗ್ಲಾಮರ್ ಲೆಸ್ ಆಗಿ ಶಿವಣ್ಣ ಅವರ ಜೊತೆ ಮಿಂಚಿದ್ದಾರೆ.

ಮುತ್ತುಲಕ್ಷ್ಮಿಯಾದ ಯಜ್ಞಾ ಶೆಟ್ಟಿ

ಸಖತ್ ಟ್ಯಾಲೆಂಟೆಡ್ ನಟಿ ಯಜ್ಞಾ ಶೆಟ್ಟಿ ಅವರು 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯಾಗಿ ಅದ್ಭುತವಾಗಿ ನಟಿಸಿದ್ದಾರೆ.

ಚಿತ್ರದ ಪರಿಚಯ ಸಖತ್ತಾಗಿದೆ

ಅದ್ಭುತ ಕೈಚಳಕವನ್ನು ಹೊಂದಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಫಸ್ಟ್ ಮತ್ತು ಸೆಕೆಂಡ್ ಟ್ರೈಲರ್ ಗಳಲ್ಲಿ ಆಕರ್ಷಕ ಮತ್ತು ಆಸಕ್ತಿದಾಯಕ ಟ್ರಿಕ್ಸ್ ಗಳನ್ನು ಬಳಸಿ ಸಿನಿ ಪ್ರೀಯರನ್ನು ಆಕರ್ಷಿಸಲು, ತುಂಬಾ ಕಸರತ್ತು ಮಾಡಿದ್ದಾರೆ.

ಪವರ್ ಫುಲ್ ಡೈಲಾಗ್ ಗಳು

ಚಿತ್ರದ ಸೆಕೆಂಡ್ ಟ್ರೈಲರ್ ನಲ್ಲಿ ನಟ ಶಿವರಾಜ್ ಕುಮಾರ್ ಅವರ ಪವರ್ ಫುಲ್ ಡೈಲಾಗ್ ಗಳು ಸಖತ್ ಖಡಕ್ ಆಗಿದ್ದು, ಶಿವಣ್ಣ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿ, ಚಿತ್ರ ತೆರೆಗೆ ಬರುವುದನ್ನು ಕಾಯುವಂತೆ ಮಾಡಿದೆ.

ಸಂದೀಪ್ ಅವರ ರೋಮಾಂಚನಕಾರಿ ಪಾತ್ರ

ಚಿತ್ರದಲ್ಲಿ ವೀರಪ್ಪನ್ ಪಾತ್ರ ವಹಿಸಿರುವ ಸಂದೀಪ್ ಭಾರದ್ವಾಜ್ ಅವರ ರೋಮಾಂಚನಕಾರಿ ಪಾತ್ರಗಳು ಸಿನಿಪ್ರೀಯರನ್ನು ಸೆಳೆಯುತ್ತಿದೆ.

ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸಿನಿಮಾಕ್ಕೆ ಕಾಯುತ್ತಿರುವ ಶಿವಣ್ಣ ಅಭಿಮಾನಿಗಳಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮೂರು ಭಾಷೆಗಳಲ್ಲಿ ಭರ್ಜರಿ ಉಡುಗೊರೆ ನೀಡಿದ್ದಾರೆ. ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಈ ಮೂರು ಭಾಷೆಗಳಿಗೂ ಶಿವಣ್ಣ ಅವರೇ ವಾಯ್ಸ್ ಡಬ್ ಮಾಡಿದ್ದಾರಂತೆ. ಜಸ್ಟ್ ವೈಟ್ ಅಂಡ್ ವಾಚ್

'ಕಿಲ್ಲಿಂಗ್ ವೀರಪ್ಪನ್' ಕ್ರೇಜ್

ಮೂರು ಭಾಷೆಗಳಲ್ಲೂ (ಕನ್ನಡ, ತಮಿಳು, ತೆಲುಗು) ಏಕಕಾಲದಲ್ಲಿ ಬಿಡುಗಡೆಯಾಗಿರುವ ಚಿತ್ರದ ಸೆಕೆಂಡ್ ಟ್ರೈಲರ್ ಅಭಿಮಾನಿಗಳಲ್ಲಿ ಕುತೂಹಲದ ಜೊತೆಗೆ ಸಖತ್ ಕ್ರೇಜ್ ಹುಟ್ಟಿಸುತ್ತಿದೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ

'ರಕ್ತಚರಿತ' ಚಿತ್ರದ ನಂತರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಚಿತ್ರಕ್ಕೆ ವರ್ಮಾ ಅಭಿಮಾನಿಗಳು ಕಾಯುತ್ತಿದ್ದು, ಅವರಿಗೆ 'ಕಿಲ್ಲಿಂಗ್ ವೀರಪ್ಪನ್' ಒಂದೊಳ್ಳೆ ಉಡುಗೊರೆ ಆಗಬಹುದು. ಒಟ್ನಲ್ಲಿ ಎಲ್ಲಾ ಪ್ರಶ್ನೆಗಳಿಗೆ ನವೆಂಬರ್ 6 ರಂದು ಉತ್ತರ ದೊರೆಯಲಿದೆ.

English summary
10 Fascinating Things About Kannada movie 'Killing Veerappan' Trailer-2. 'Killing Veerappan' features Kannada Actor Shiva Rajkumar, Kannada Actress Parul Yadav, Actress Yagna Shetty, Actor Sandeep Bharadwaj in the lead role. The movie is directed by Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada